September 26, 2026
WhatsApp Image 2026-09-26 at 10.05.01 AM

ನಾರಾವಿ: ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿ.13 ಭಾನುವಾರದಂದು ನಾರಾವಿ ವರ್ಮ ಶ್ರೀಶ್ರೀ ಸಭಾ ಭವನದಲ್ಲಿ ಜರಗಿತು.


ರೈತಪರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಸಂಘವು ಮಹಾಸಭೆಯ ಸಂದರ್ಭದಲ್ಲಿ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಯವ್ಯಾಪ್ತಿಯ ಐದು ಗ್ರಾಮಗಳಿಂದ ಆಯ್ದ ಹನ್ನೊಂದು ಮಂದಿ ಉತ್ತಮ ಕೃಷಿಕರನ್ನು ಗೌರವಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಕೃಷಿಯಲ್ಲಿ ವೈವಿದ್ಯಮಯ ಚಟುವಟಿಕೆಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸಿರುವ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಇತರ ರೈತರಿಗೂ ಮಾದರಿಯಾಗುವಂತೆ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಸುಮಾರು 300 ಮಂದಿ ಭತ್ತ ಸಾಗುವಳಿ ಮಾಡುವ ರೈತರನ್ನು ಗುರುತಿಸಿ ಪ್ರೋತ್ಸಾಹದನ ವಿತರಿಸುವ ಮೂಲಕ ಕೃಷಿಕರಿಗೆ ಬೆಂಬಲ ನೀಡಿತು. ಕೃಷಿ ಕ್ಷೇತ್ರದಲ್ಲಿ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಘವು ಕೈಗೊಂಡ ಈ ಕ್ರಮ ಗಮನ ಸೆಳೆಯಿತು.


ಸಂಘವು ವರದಿ ಸಾಲಿನಲ್ಲಿ ಕಾರ್ಯವ್ಯಾಪ್ತಿಯ ಐದು ಗ್ರಾಮಗಳ ಸರಕಾರಿ ಶಾಲಾ ಮಕ್ಕಳಿಗೆ ಸುಮಾರು 2.80 ಲಕ್ಷ ವೆಚ್ಚದ ಬರೆಯುವ ಪುಸ್ತಕವನ್ನು ಉಚಿತವಾಗಿ ನೀಡಿರುತ್ತದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕೈಗೊಂಡ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಆರೋಗ್ಯದ ವಿಚಾರದಲ್ಲೂ ಸಂಘ ವಿಶೇಷ ಕಾಳಜಿ ವಹಿಸಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಸಣಾ ಶಿಬಿರ ಆಯೋಜಿಸಲಾಗಿದ್ದು ಹಲವಾರು ಮಂದಿ ಸದಸ್ಯರು ಮತ್ತು ಸಾರ್ವಜನಿಕರು ಪ್ರಯೋಜನ ಪಡಕೊಂಡಿರುತ್ತಾರೆ. ಗ್ರಾಮೀಣ ಜನರಿಗೆ ಆರೋಗ್ಯ ಸೇವೆಯನ್ನು ಅವರ ಬಳಿಯೇ ಒದಗಿಸುವ ಪ್ರಯತ್ನವಾಗಿ ಈ ಶಿಬಿರ ಗಮನಾರ್ಹವಾಗಿತ್ತು,


ಒಂದೇ ಸೂರಿನಡಿ ರೈತರಿಗೆ ಹಲವು ಸೌಲಭ್ಯನಾರಾವಿ ಕೃಷಿಪತ್ತಿನ ಸಂಘದ ಪ್ರಧಾನ ಕಚೇರಿಯಲ್ಲಿ ಗೊಬ್ಬರ ದಾಸ್ತಾನು ಗೋದಾಮು, ಭಾರತೀಯ ಜನೌಷಧಿ ಕೇಂದ್ರ, ಕ್ಯಾಂಪೋ ವತಿಯಿಂದ ಅಡಿಕೆ ಖರೀದಿ ಕೇಂದ್ರ ಹಾಗು ಶಾಖೆ ಕೊಕ್ರಾಡಿಯಲ್ಲಿ ಎಟಿಎಂ ಮತ್ತು ಗೊಬ್ಬರ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಸ್ಥಳೀಯ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ. ರೈತರಿಗೆ ಅಗತ್ಯವಿರುವ ಗೊಬ್ಬರ ಸುಲಭವಾಗಿ ದೊರೆಯುವುದರ ಜೊತೆಗೆ ಹಣಕಾಸು ವ್ಯವಹಾರ ಹಾಗು ಅಗತ್ಯ ಔಷಧಿಗಳನ್ನು ಕಡಿಮೆ ದರದಲ್ಲಿ ಸ್ಥಳೀಯವಾಗಿಯೇ ಪಡೆಯಲು ಈ ಸೌಲಭ್ಯಗಳು ಸಹಕಾರಿಯಾಗಿವೆ.


ಸಂಘ ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೆ ರೈತರು ವಿದ್ಯಾರ್ಥಿಗಳು ಆರೋಗ್ಯ ಹಾಗು ಸಾಮಾಜಿಕವಾಗಿ ಅಗತ್ಯವಿರುವ ವರ್ಗಗಳ ಪರವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅದರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.


ಸಂಘದ ಅಧ್ಯಕ್ಷರಾದ ಎನ್.ಸುಧಾಕರ ಭಂಡಾರಿ ನಾರಾವಿ ಅವರ ನೇತೃತ್ವದಲ್ಲಿ ಈ ಎಲಾ ಜನಪರ ಕಾರ್ಯಗಳು ನಡೆಯಿತ್ತಿದ್ದು ಸಹಕಾರಿ ಕ್ಷೇತ್ರವು ಸಮಾಜದ ಅಭಿವೃದ್ಧಿಯಲ್ಲಿ ವಹಿಸಬಹುದಾದ ಪಾತ್ರಕ್ಕೆ ನಾರಾವಿ ಕೃಷಿಪತ್ತಿನ ಸಹಕಾರ ಸಂಘ ಉದಾಹರಣೆಯಾಗಿ ಗುರುತಿಸಿಕೊಂಡಿದೆ.


ಸಹಕಾರಿಯ ಮೂಲಕ ಸಮಾಜಮುಖಿ ಸೇವೆಗೆ ನಾರಾವಿ ಕೃಷಿ ಪತ್ತಿನ ಸಹಕಾರ ಸಂಘ ಮುಂದಾಗಿರುವುದು ಗಮನಾರ್ಹವಾಗಿದೆ.

About The Author

Leave a Reply