August 21, 2026
WhatsApp Image 2026-08-21 at 3.10.38 PM

ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಔಷಧ ಮಾರಾಟ ಜಾಲದ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು ಆರು ಮಂದಿ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ.

ವಿರೋಧ ಪಕ್ಷದವರಿಗೆ ನನ್ನನ್ನು ಹಾಗೂ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ: ಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ. ವಂಶಿಕೃಷ್ಣ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.

ಇತ್ತೀಚೆಗೆ ಬಿಡದಿ ಸಮೀಪ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧ ತಯಾರಿಸಿ, ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ 4.91 ಕೋಟಿ ರೂ. ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಸರ್ಕಾರ, ಜಾಲದ ಬೇರುಗಳನ್ನು ಪತ್ತೆಹಚ್ಚಲು ಪೊಲೀಸ್ ಮತ್ತು ಔಷಧ ನಿಯಂತ್ರಣ ಇಲಾಖೆಯ ದಕ್ಷ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಿದೆ.

ಎಸ್‌ಐಟಿ ತಂಡದ ವಿವರ:

ಮುಖ್ಯಸ್ಥರು: ಸಿ. ವಂಶಿಕೃಷ್ಣ (ಜಂಟಿ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)

ಸದಸ್ಯರು:

ಶಿವಪ್ರಕಾಶ್ ದೇವರಾಜು (ಎಸ್ಪಿ)

ಲೋಕೇಶ್ ಬಿ. ಜಗಲಾಸರ್ (ಸಿಐಡಿ ಎಸ್ಪಿ)

ಮಂಜುನಾಥ್ ರೆಡ್ಡಿ (ಸಹಾಯಕ ಔಷಧ ನಿಯಂತ್ರಕರು)

ನಮ್ರತಾ ಹಲ್ಲೂರು (ಸಹಾಯಕ ಔಷಧ ನಿಯಂತ್ರಕರು)

ನೇಹಾ ಮುರ್ಗಿ (ಔಷಧ ನಿರೀಕ್ಷಕಿ)

ಈ ವಿಶೇಷ ತನಿಖಾ ತಂಡದ ಸಂಪೂರ್ಣ ಮೇಲ್ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ವಹಿಸಿಕೊಳ್ಳಲಿದ್ದು, ನಕಲಿ ಔಷಧ ಜಾಲದ ಅಂತರರಾಜ್ಯ ನಂಟು ಹಾಗೂ ಸರಬರಾಜು ಮಾರ್ಗಗಳ ಕುರಿತು ಶೀಘ್ರವೇ ತನಿಖೆ ಚುರುಕುಗೊಳಿಸಲಿದ್ದಾರೆ

About The Author

Leave a Reply