August 28, 2026
WhatsApp Image 2026-08-28 at 6.09.16 AM

ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಜ್ಯಾದ್ಯಂತ ‘ಭಾರತ್ ಜೋಡೋ ಸಂಘ’ಗಳ ಸ್ಥಾಪನೆ ಹಾಗೂ ಸಂಘಟನಾ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಗಳ ರಚನೆ ಮತ್ತು ಸಮನ್ವಯದ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರಿಗೆ ವಹಿಸಲಾಗಿದೆ.

ಪಂಚಾಯತ್ ರಾಜ್ ಸಂಘಟನೆಯಲ್ಲಿ ಅವರು ತೋರಿದ ಸಕ್ರಿಯ ನಾಯಕತ್ವ, ಸಂಘಟನಾ ಸಾಮರ್ಥ್ಯ, ನಿರಂತರ ಜನಸಂಪರ್ಕ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ವಹಿಸಿದ ಪ್ರಮುಖ ಪಾತ್ರವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಯುವಜನರನ್ನು ಸಂಘಟಿಸುವುದು, ಅವರಲ್ಲಿ ಸೌಹಾರ್ದತೆ, ಸಹೋದರತ್ವ, ಸಾಮಾಜಿಕ ಸಾಮರಸ್ಯ ಹಾಗೂ ನಾಯಕತ್ವದ ಮನೋಭಾವವನ್ನು ಬೆಳೆಸುವುದು ಮತ್ತು ಗ್ರಾಮೀಣ ಭಾಗದಿಂದಲೇ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಅನುಭವ ಪರಿಣಾಮಕಾರಿಯಾಗಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಯೋಜಕರನ್ನಾಗಿ ನೇಮಿಸಿ, ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಸದಸ್ಯರಾಗಿ:
ಮುಡಿಪು ಬ್ಲಾಕ್ – ಶ್ರೀಮತಿ ವೃಂದಾ ಪೂಜಾರಿ
ಬೆಳ್ತಂಗಡಿ – ಶ್ರೀ ಅಬ್ದುಲ್ ರಜಾಕ್
ಮುಲ್ಕಿ ಬ್ಲಾಕ್ – ಶ್ರೀ ಬೋಳ ಸರ್ಫರಾಜ್
ಪುತ್ತೂರು – ಶ್ರೀ ಸಂತೋಷ್ ಭಂಡಾರಿ
ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

About The Author

Leave a Reply