September 2, 2026
WhatsApp Image 2026-09-02 at 3.19.03 PM

ಮಂಗಳೂರು: ಕುತ್ತಾರು ಜಂಕ್ಷನ್‌ನ ವೃತ್ತದ ನಾಮಕರಣ ವಿಚಾರವಾಗಿ ಕೆಲಕಾಲದಿಂದ ವಿವಾದಕ್ಕೆ ಕಾರಣವಾಗಿದ್ದ ವಿಷಯಕ್ಕೆ ಇದೀಗ ತೆರೆ ಬಿದ್ದಿದೆ. ಕುತ್ತಾರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ‘ಸೌಹಾರ್ದ ವೃತ್ತ’ವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಮಂಗಳವಾರ ರಾತ್ರಿ ಲೋಕಾರ್ಪಣೆ ಮಾಡಿದರು.

ನೂತನ ವೃತ್ತದ ಮುಕುಟದಲ್ಲಿ ಕೊರಗಜ್ಜನ ಮುಟ್ಟಾಲೆ ಹಾಗೂ ದಂಟೆಯ ಪ್ರತಿಕೃತಿಯನ್ನು ಅಳವಡಿಸಲಾಗಿದ್ದು, ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ವೃತ್ತವನ್ನು ವಿನ್ಯಾಸಗೊಳಿಸಲಾಗಿದೆ.

ವೃತ್ತದಲ್ಲಿ ಕೊರಗಜ್ಜನ ಆದಿಕ್ಷೇತ್ರ, ರಾಣಿಪುರ ಚರ್ಚ್ ಹಾಗೂ ಕುಂಡೂರು ಜುಮಾ ಮಸೀದಿಗೆ ತೆರಳುವ ಮಾರ್ಗಗಳ ಕುರಿತು ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ವಿವಿಧ ಧರ್ಮಗಳ ಹಾಗೂ ಸಮುದಾಯಗಳ ನಡುವೆ ಸೌಹಾರ್ದದ ಸಂದೇಶ ಸಾರುವ ಉದ್ದೇಶವನ್ನು ಹೊಂದಲಾಗಿದೆ.

‘ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ’

ವೃತ್ತವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ, ಈ ಮಣ್ಣಿನ ಶಕ್ತಿ ಎಂದು ಹೇಳಿದರು. ಎಲ್ಲ ಧರ್ಮಗಳ ಸಂದೇಶವೂ ಇನ್ನೊಬ್ಬರ ದೇಹದ ಗಾಯ ಹಾಗೂ ಮನಸ್ಸಿನ ನೋವನ್ನು ಗುಣಪಡಿಸುವ ಔಷಧಿಯಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕುತ್ತಾರಿನಿಂದಲೇ ಇಡೀ ದೇಶಕ್ಕೆ ಸೌಹಾರ್ದದ ಸಂದೇಶ ರವಾನೆಯಾಗಬೇಕು. ಕುತ್ತಾರು ಪ್ರದೇಶವು ಮುಂದಿನ ದಿನಗಳಲ್ಲಿ ಸೌಹಾರ್ದ ಮತ್ತು ಸೋದರತೆಯ ಪ್ರದೇಶವಾಗಿ ಬೆಳೆಯಬೇಕು ಎಂದು ಖಾದರ್ ಹೇಳಿದರು.

About The Author

Leave a Reply