September 9, 2026
WhatsApp Image 2026-09-09 at 1.30.05 PM

ಉಳ್ಳಾಲ / ಹರೇಕಳ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಚುನಾವಣಾ ಆಯೋಗದ SIR ನೋಟಿಸ್ ನೀಡಿದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಬಂದ ಕೂಡಲೇ ತಕ್ಷಣ ಎಚ್ಚೆತ್ತುಕೊಂಡು, ತಪ್ಪು ತಿದ್ದಿಕೊಂಡು ಖುದ್ದು ಹಾಜಬ್ಬರ ಮನೆಗೆ ತೆರಳಿ ಕ್ಷಮೆಯಾಚಿಸಿದ ಚುನಾವಣಾ ಅಧಿಕಾರಿಗಳ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ಮೀಡಿಯಾ ವನ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಮಂಗಳೂರು ವಿಧಾನಸಭಾ ಕ್ಷೇತ್ರದ 2002ರ ಹಳೆಯ ಮತದಾರರ ಪಟ್ಟಿಯಲ್ಲಿ ಕೇವಲ ‘ಹಾಜಬ್ಬ’ ಎಂದು ಇದ್ದ ಹೆಸರು, ಪ್ರಸ್ತುತ ಆಧಾರ್, ಪಡಿತರ ಚೀಟಿ, ಪಾಸ್‌ಪೋರ್ಟ್ ನಲ್ಲಿ ‘ಹರೇಕಳ ಹಾಜಬ್ಬ’ ಎಂದು ಇರುವುದರಿಂದ ಹೆಸರು ಹೊಂದಾಣಿಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ಸೆಪ್ಟೆಂಬರ್ 11 ರಂದು ಪಂಚಾಯಿತಿಗೆ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿದ್ದರು.

ಈ ವಿಚಾರ ಮೀಡಿಯಾ ವನ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ಇದು ಕೇವಲ ಹೆಸರು ಹೊಂದಾಣಿಕೆಯ ಸಣ್ಣ ವ್ಯತ್ಯಾಸ, ಪದ್ಮಶ್ರೀ ಪುರಸ್ಕೃತರಿಗೆ ನೋಟಿಸ್ ನೀಡಿದ್ದು ಸರಿಯಲ್ಲ ಎಂದು ಅರಿತ ತಕ್ಷಣ, ಅವರು ಹಾಜಬ್ಬರನ್ನು ಕಚೇರಿಗೆ ಅಲೆಸುವ ಬದಲು ಮಾನವೀಯತೆ ಮೆರೆದಿದ್ದಾರೆ.

ಖುದ್ದು ಹರೇಕಳದಲ್ಲಿರುವ ಹಾಜಬ್ಬರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ, ನೋಟಿಸ್ ನೀಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ತಮ್ಮ ತಪ್ಪು ಕಲ್ಪನೆಯಿಂದ ಹಾಜಬ್ಬರ ಹೆಸರು ಮಾಯವಾಗಿತ್ತು ಎಂಬುದನ್ನು ಅರಿತು ಸರಿಪಡಿಸಿಕೊಂಡಿರುವುದು ಅಧಿಕಾರಿಗಳ ಪ್ರಬುದ್ಧತೆಗೆ ಸಾಕ್ಷಿ.

ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಬಂದ ಕೂಡಲೇ ತಕ್ಷಣ ಸ್ಪಂದಿಸಿ, ಅಹಂಕಾರ ತೋರದೆ ಮನೆಗೆ ಹೋಗಿ ಕ್ಷಮೆ ಕೇಳುವುದು ದೊಡ್ಡ ಗುಣ. ಅಧಿಕಾರಿಗಳ ಈ ತ್ವರಿತ ಸ್ಪಂದನೆ ಮತ್ತು ಮಾನವೀಯ ನಡೆ ನಿಜಕ್ಕೂ ಶ್ಲಾಘನೀಯ ಹಾಗೂ ಇತರ ಇಲಾಖೆಗಳಿಗೂ ಮಾದರಿಯಾಗಬೇಕು ಎಂದು ರಿಯಾಝ್ ಹರೇಕಳ ಅವರು ಮೀಡಿಯಾ ವನ್ ಮೂಲಕ ತಿಳಿಸಿದ್ದಾರೆ.

About The Author

Leave a Reply