September 11, 2026
WhatsApp Image 2026-09-11 at 9.52.17 AM

:ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ವಿಭಾಗದ ಯಗಟಿ ಎಂ.ಯು ಎಸ್. ಎಸ್. ವ್ಯಾಪ್ತಿಗೆ ಬರುವ ಅರೇಹಳ್ಳಿ,ಬಿಸಿಲೆರೆ, ಮಾವಿನಹಳ್ಳಿ,ಹಿರೇ ಬಳ್ಳೆ ಕೆರೆ ಹಾಗೂ ಹಾಗೂ ಸುತ್ತಮು ತ್ತಲಿನ ಗ್ರಾಮಗಳ ರೈತರ ಜಮೀನಿನ ಐಪಿ ವಿದ್ಯುತ್ತನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ. ಮೊದಲೇ.. ಅನಾವೃಷ್ಟಿಯ ದಸೆಯಿಂದ ರೈತನ ಅಳಿದುಳಿದ ಫಸಲುಗಳು ಮತ್ತು ಬೆಳೆಗಳ ಮೇಲೆ ಭರವಸೆ ಇಟ್ಟಿದ್ದ ರೈತನ ಬೆನ್ನಿಗೆ ಕಾಯ್ದ ಕಬ್ಬಿಣದ ಸಲಾಕೆಯಿಂದ ಭಾ ರಿಸಿದಂತಾಗಿ ನಾಡಿನ ರೈತ ಕುಟುಂಬಗಳು ಕಂಗಾಲಾಗಿ ಹೋಗಿವೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಸ್ಪಂದಿಸಿದ ಅಧಿಕಾರಿಗಳ ತಂಡಕ್ಕೆ ಸರಕಾರಿ ಆದೇಶದಂತೆ ಏಳು ಗಂಟೆಗಳ ಕಾಲ ಸಮರ್ಪಕವಾಗಿ ವಿದ್ಯುತ್ ಅನ್ನು ನೀಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಲಾಯಿತು. ಭರದಿಂದ ಬಸವಳಿದಿರುವ ತಾಲೂಕಿನ ರೈತರ ಮನವಿಯನ್ನು ಸ್ವೀಕರಿಸಿದ ಏಇ ಶ್ರೀಮತಿ ಕೆ ಎಸ್ ವೀಣಾ ಹಾಗೂ ತಾಲೂಕಿನ ಶ್ರೀಯುತ. ರವಿಕಿರಣ್ ರವರು. ಮುಂದಿನ ಎರಡು ಮೂರು ದಿನಗಳಲ್ಲಿ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ತನ್ನು ನೀಡುವುದಾಗಿ ಅರ್ಜಿದಾರರಾದ ಶ್ರೀ ಏನ್. ಮಹೇಶ್ ಶ್ರೀ ಎ. ಸಿ ಮರಳು ಸಿದ್ದಪ್ಪ.. ಹಾಗೂ ಎ ಜೆ ಶಿವಕುಮಾರಯ್ಯ ಮುಂತಾದ ಗ್ರಾಮಸ್ಥರುಗಳ ಉಪಸ್ಥಿತಿಯಲ್ಲಿ ಭರವಸೆಯನ್ನು ನೀಡಿರುತ್ತಾರೆ.

About The Author

Leave a Reply