

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ವೇಳೆ ಮಂಗಳೂರು ರಾಮ ಲಕ್ಷ್ಮಣ ಹಾಲ್ ನ ಗೋಡೆ ದುರಂತದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕರೆಗೆ ತಕ್ಷಣವೇ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ದುರಂತದ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ…!!!
NSUI ಪ್ರಧಾನ ಕಾರ್ಯದರ್ಶಿಗಳಾದ ಯುಟಿ ಫರೀದ್ ರವರು ತಕ್ಷಣವೇ ಬೆಂಗಳೂರಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಯುಟಿ ಖಾದರ್ ಫರೀದ್ ರವರನ್ನು ಸಂಪರ್ಕ ಮಾಡಿ ಮುಂದೆ ಬೇಕಾಗುವಂತಹ ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಹಾಗೂ ರಾತ್ರೋರಾತ್ರಿ 3:30 ವೇಳೆ ಪೋಲೀಸ್ ಇಲಾಖೆ ಹಾಗೂ ವೈದ್ಯಕೀಯ ತಂಡವನ್ನು ಕರೆಸಿ postmortem ಪ್ರಕ್ರಿಯೆ ಮಾಡಿಸುವಲ್ಲಿ ತ್ವರಿತಗತಿಯಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ…!!!
ಮಂಗಳೂರು ಹೈಲಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಕುಟುಂಬದವರೊಂದಿಗೆ ಇದ್ದು ಸ್ವಾಂತನ ಹೇಳುವ ಮೂಲಕ ಹೆಚ್ಚುವರಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಹಾಗೂ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಮೃತಪಟ್ಟ ಮೊಹಮ್ಮದ್ ಶಮ್ಮಾಝ್ ರವರ ಮರಣೋತ್ತರ ಪರೀಕ್ಷೆ ಮುಗಿಯುವ ತನಕ ರಾತ್ರಿಯಿಂದ ಬೆಳಗಿನ ಜಾವವರೆಗೆ ಮೃತ ಮೊಹಮ್ಮದ್ ಶಮ್ಮಾಝ್ ರವರ ಕುಟುಂಬದವರೊಂದಿಗೆ ಇದ್ದು ಆಸರೆಯಾದರು …

ಸಂಜೆ ಐದು ಗಂಟೆಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ತಲುಪಿದ NSIU ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿಗಳಾದ ಯುಟಿ ಫರೀದ್ ರವರು ಮರುದಿನ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ಎಲ್ಲಾ ವ್ಯವಸ್ಥೆಗಳನ್ನು ತ್ವರಿತವಾಗಿ ಮಾಡುವಲ್ಲಿ ಮೃತ ಮೊಹಮ್ಮದ್ ಶಮ್ಮಾಝ್ ಕುಟುಂಬಕ್ಕೆ ಆಸರೆಯಾಗಿದ್ದಾರೆ ಹಾಗೂ ಈ ಸಂದರ್ಭದಲ್ಲಿ NSUI ಉಳ್ಳಾಲ ಘಟಕದ ವಿಧ್ಯಾರ್ಥಿಗಳಾದ ಮುಬಾರಕ್, ಶಾಕಿರ್, ಶಾಹಿಲ್, ಅಕ್ಮಲ್, ಶಾಝ್, ಅಶ್ಫಕ್, ಫಾಹಿಮ್, ಝನೂನ್ ಹಾಗೂ ಶಫೀಕ್ ಮತ್ತು ಇತರೆ ವಿದ್ಯಾರ್ಥಿಗಳು ಕುಟುಂಬದವರೊಂದಿಗೆ ಸಾಥ್ ನೀಡಿದ್ದಾರೆ…
ವಿದ್ಯಾರ್ಥಿಗಳ ತಂದೆ, ತಾಯಿ ಹಾಗೂ ಕುಟುಂಬ ಸದಸ್ಯರಿಗೆ ಚಿಕಿತ್ಸೆಯ ಬಗ್ಗೆ ಅಸಮಾಧಾನವಿದ್ದ ಕಾರಣ NSUI ಪ್ರಧಾನ ಕಾರ್ಯದರ್ಶಿಗಳಾದ ಯುಟಿ ಫರೀದ್ ರವರು ತಕ್ಷಣವೇ ಆರೋಗ್ಯ ಸಚಿವರಾದ ಡಾ ಯುಟಿ ಖಾದರ್ ಫರೀದ್ ರವರನ್ನು ಸಂಪರ್ಕ ಮಾಡಿ ತಕ್ಷಣವೇ ಆಸ್ಪತ್ರೆಗೆ DHO ರವರನ್ನು ಕರೆಸಿ ಹೆಚ್ಚುವರಿ ಚಿಕಿತ್ಸೆಗೆ ಒತ್ತಾಯಿಸಿದರು…






