September 29, 2026
WhatsApp Image 2026-09-29 at 2.53.33 PM (1)

ತಲಸ್ಸೇರಿ ಸೌದಿ ಅರೇಬಿಯಾದಲ್ಲಿ ಮಾದಕ ವಸ್ತು ಸಾಗಾಟ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ಅಬುಟಿ ವೆಲ್ಲಿಲ್ ಅವರನ್ನು ಗಲ್ಲಿಗೇರಿಸಲಾಗಿದೆ. ಆದರೆ ಅಬುಟಿ ಯಾವುದೇ ತಪ್ಪು ಮಾಡಿಲ್ಲ, ವಿದೇಶದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದಾಗ ಸಹಾಯ ಮಾಡಿದ ವ್ಯಕ್ತಿಯೊಬ್ಬರು ಬಳಿಕ ಮೋಸ ಮಾಡಿ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಕಳೆದ ಮೂರು ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಮ್‌ನ ಖತೀಫ್ ಜೈಲಿನಲ್ಲಿ ಇದ್ದ ಅಬುಟಿಯನ್ನು ಭಾನುವಾರ ಬೆಳಗ್ಗೆ ಗಲ್ಲಿಗೇರಿಸಲಾಗಿದೆ ಎಂದು ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಸೌದಿ ಅರೇಬಿಯಾದಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಕುಟುಂಬಕ್ಕೆ ತಿಳಿಸಲಾಗಿದೆ.

ತಮ್ಮ ಮಗನ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ತಾಯಿ ಶಾಹಿದಾ, “ನನ್ನ ಮಗ ನಿರಪರಾಧಿ. ಅವನು ಯಾವುದೇ ತಪ್ಪು ಮಾಡುವವನಲ್ಲ” ಎಂದು ಹೇಳಿದ್ದಾರೆ. ಜೈಲಿಗೆ ತೆರಳುವ ಮುನ್ನ ಅಬುಟಿ, “ಅಮ್ಮಾ ನಾನು ಮನೆಗೆ ಬರುತ್ತಿದ್ದೇನೆ. ನನ್ನ ತಾಯಿ ನನ್ನನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲು ಬರುತ್ತಿದ್ದಾರೆ” ಎಂದು ಹೇಳಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಅಬುಟಿಯನ್ನು ಕರೆದುಕೊಂಡು ಬರಲು ಅವರ ತಾಯಿ ಶಾಹಿದಾ, ಪತ್ನಿ ಮಿಸಿರಿಯಾ ಹಾಗೂ ಮಕ್ಕಳು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ವಿಮಾನ ಬಂದರೂ ಅಬುಟಿ ಕಾಣಿಸಿಕೊಳ್ಳಲಿಲ್ಲ. ಬಳಿಕವೇ ಅವರಿಗೆ ಮರಣದಂಡನೆ ಜಾರಿಗೊಳಿಸಿರುವ ಮಾಹಿತಿ ದೊರೆತಿದೆ ಎಂದು ಕುಟುಂಬ ತಿಳಿಸಿದೆ.

ಕಾರಿನ ಇಂಧನ ಟ್ಯಾಂಕ್‌ನಲ್ಲಿ 43 ಕೆಜಿ ಮಾದಕ ವಸ್ತು ಪತ್ತೆ:

2023ರಲ್ಲಿ ಒಮಾನ್‌ನಿಂದ ಸೌದಿ ಅರೇಬಿಯಾಕ್ಕೆ ರಸ್ತೆ ಮಾರ್ಗವಾಗಿ ಗಡಿ ದಾಟುತ್ತಿದ್ದ ಲ್ಯಾಂಡ್ ಕ್ರೂಸರ್ ಕಾರೊಂದನ್ನು ಭದ್ರತಾ ಪಡೆಗಳು ತಪಾಸಣೆ ನಡೆಸಿದಾಗ, ಅದರ ಇಂಧನ ಟ್ಯಾಂಕ್‌ನಿಂದ ಸುಮಾರು 43 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಂಡಿದ್ದಾಗಿ ಕುಟುಂಬದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಕಾರಿನ ಚಾಲಕರಾಗಿದ್ದ ಅಬುಟಿಯನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ, ಮತ್ತೊಬ್ಬ ವ್ಯಕ್ತಿ ತನಗೆ ಒಂದು ಪಾರ್ಸೆಲ್ ನೀಡಿದ್ದಾನೆ ಹಾಗೂ ಅದರೊಳಗೆ ಮಾದಕ ವಸ್ತುಗಳಿರುವುದು ತನಗೆ ತಿಳಿದಿರಲಿಲ್ಲ ಎಂದು ಅಬುಟಿ ಪೊಲೀಸರು ಮತ್ತು ನ್ಯಾಯಾಲಯದ ಮುಂದೆ ಹೇಳಿದ್ದರು. ಆದರೆ ಅವರ ಈ ಹೇಳಿಕೆಯನ್ನು ಸ್ವೀಕರಿಸಲಾಗಲಿಲ್ಲ ಎಂದು ಕುಟುಂಬ ಹೇಳಿದೆ.

ಮಾದಕ ವಸ್ತು ಪತ್ತೆಯಾದ ಕಾರು ಅಬುಟಿ ಹೆಸರಿನಲ್ಲಿತ್ತು. ಆದರೆ ಆರ್ಥಿಕವಾಗಿ ಹಿಂದುಳಿದಿದ್ದ ಅಬುಟಿಗೆ ಸೌದಿ ಅರೇಬಿಯಾ ಅಥವಾ ಕೊಲ್ಲಿ ರಾಷ್ಟ್ರಗಳಲ್ಲಿ ಸ್ವಂತ ಕಾರು ಇರಲಿಲ್ಲ. ಈ ವಿಚಾರದಲ್ಲಿಯೂ ಅಬುಟಿಗೆ ಮೋಸ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ತಮ್ಮ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪ್ರಕರಣದ ಹಿಂದಿರುವ ಸತ್ಯ ಹೊರಬರಬೇಕು ಎಂದು ಕುಟುಂಬ ಒತ್ತಾಯಿಸಿದೆ. ಈ ಸಂಬಂಧ ಅಬುಟಿಯ ತಾಯಿ ಶಾಹಿದಾ, ಪತ್ನಿ ಹಾಗೂ ಸಹೋದರಿಯರಾದ ಶಕೀಲಾ, ಸಫೀಮ್ ಮತ್ತು ಸಮೀರಾ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರಿ ಶೆರ್ರಿ ವಿಪುಲ್ ಅವರನ್ನು ಸಂಪರ್ಕಿಸಿದ್ದಾರೆ. ಅಬುಟಿ ನಿರಪರಾಧಿಯಾಗಿದ್ದು, ಮೋಸದ ಮೂಲಕ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟಿದ್ದಾರೆ.

About The Author

Leave a Reply