

ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಅವರನ್ನು ಶನಿವಾರ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು.
ಇದೀಗ ಬಿಡುಗಡೆಗೊಂಡು ಮಾತನಾಡಿರುವ ಅವರು ನಾನು ಮಲಗಿದ್ದ ಸಮಯದಲ್ಲಿ ಮನೆಯೊಳಗೆ ನುಗ್ಗಿದ ಜನರು ಬಲವಂತವಾಗಿ ನನ್ನನ್ನು ಅಪಹರಣಗೈದಿದ್ದರು. ನನ್ನನ್ನು ಅವರು ಬಂಧಿಸಿರಲಿಲ್ಲ. ಅಪಹರಣ ಮಾಡಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅದರೊಂದಿಗೆ ತಮ್ಮ ಪಾಸಪೋರ್ಟ್ ತೋರಿಸಿ ತಾನು ಭಾರತೀಯ ಪ್ರಜೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಮನೆಯಲ್ಲಿ ನನ್ನ ಪೋಷಕರ, ನನ್ನ ಮೊಬೈಲ್ ಎಳೆದುಕೊಂಡಿದ್ದಾರೆ.ವಕೀಲರನ್ನು ಬೇಟಿಯಾಗಲು ಬಿಡಲಿಲ್ಲ. ಇದು ನನ್ನ ಬಂಧನವಾಗಿರಲಿಲ್ಲ ಇದು ಅಪಹರಣವಾಗಿತ್ತು. ಪಾರದರ್ಶಕ ಚುನಾವಣಾ ಆಯೋಗದ ಬೇಡಿಕೆಯಿಟ್ಟ ಕಾರಣಕ್ಕೆ ಜನರನ್ನು ಈ ರೀತಿ ಧಮನಿಸುವುದು ಪ್ರಜಾಪ್ರಭುತ್ವದ ಲಕ್ಷಣವೇ? ಸರ್ವಾಧಿಕಾರ ಬಂದ ತಕ್ಷಣ ನನ್ನ ಬಂಧನದ ಕುರಿತು ನಗುವವರು ಕೂಡ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬುವುದನ್ನು ನೆನಪಿಡಿ. ಅದೇ ರೀತಿ ಸರ್ಕಾರ ಎಷ್ಟೇ ನಮ್ಮನ್ನು ಧಮನಿಸಿದೂ ಮತ್ತೆ ಮತ್ತೆ ಮಾತನಾಡುವುದಾಗಿ ಯುಟ್ಯೂಬರ್ ಧ್ರುವ್ ರಾತಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.







