November 9, 2026
WhatsApp Image 2026-11-08 at 5.18.38 PM

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರ್ಗೇಟ್ ಬಳಿ ಸರ್ಕಲ್ ಇಲ್ಲದ ಕಾರಣದಿಂದಾಗಿ ಎಷ್ಟು ಅಪಘಾತಗಳು ಸಂಭವಿಸಿವೆ ಎಂದು ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.

ಮಾರ್ಗೇಟ್ ನಲ್ಲಿ ನಾಲ್ಕು ರಸ್ತೆಗಳು ಅಡ್ಡವಾಗಿ ಹೋಗುತ್ತವೆ. ಆದರೆ ಅಲ್ಲಿ ಸರಿಯಾದ ಸರ್ಕಲ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಪ್ರತಿದಿನ ವಾಹನ ಸವಾರರು, ಪಾದಚಾರಿಗಳು ಜೀವ ಭಯದಲ್ಲಿ ಓಡಾಡುವಂತಾಗಿದೆ. ನಾಲ್ಕು ಕಡೆಯಿಂದ ಒಮ್ಮೆಲೆ ಬರುವ ವಾಹನಗಳಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಶಾಸಕರ ನಿರ್ಲಕ್ಷ್ಯವೋ, ಪಾಲಿಕೆಯ ನಿರ್ಲಕ್ಷ್ಯವೋ?
ಈ ಬಗ್ಗೆ ಮಾತನಾಡಿದ ರಿಯಾಝ್ ಹರೇಕಳ ಅವರು, “ಶಾಸಕರ ನಿರ್ಲಕ್ಷ್ಯ, ಮಹಾನಗರ ಪಾಲಿಕೆಯ ದಡ್ಡತನವೋ, ಜನಪ್ರತಿನಿಧಿಗಳ ಗೋಲ್‌ಮಾಲೋ ಏನು ಗೊತ್ತಾಗುವುದಿಲ್ಲ. ಆದರೆ ಸೂಕ್ತ ಪರಿಹಾರ ಮಾಡಿ ಅಪಘಾತವನ್ನು ತಪ್ಪಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಎಷ್ಟು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಮಾರ್ಗೇಟ್‌ನಲ್ಲಿ ನಡೆಯುವ ಸಂಭವಿದೆ. ನಾಲ್ಕು ರಸ್ತೆ ಅಡ್ಡವಾಗಿ ಹೋಗುವುದರಿಂದ ಜನರ ಪ್ರಾಣಕ್ಕೆ ಸಂಕಟ ತಂದಿದೆ. ಕೂಡಲೇ ಸರ್ಕಲ್ ನಿರ್ಮಿಸಬೇಕು. ಇಲ್ಲದಿದ್ದರೆ ಸಾವು-ನೋವು ಕಟ್ಟಿಟ್ಟ ಬುತ್ತಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜನರ ಆಗ್ರಹ:
ಸ್ಥಳೀಯ ನಾಗರಿಕರು ಕೂಡ ಇದೇ ಆಗ್ರಹ ಮಾಡುತ್ತಿದ್ದಾರೆ. ಮಾರ್ಗೇಟ್ ಜಂಕ್ಷನ್ ಮಂಗಳೂರಿನ ಅತ್ಯಂತ ಬ್ಯುಸಿ ಜಾಗಗಳಲ್ಲಿ ಒಂದು. ಶಾಲಾ-ಕಾಲೇಜು ಮಕ್ಕಳು, ಆಸ್ಪತ್ರೆಗೆ ಹೋಗುವವರು, ಕೆಲಸಕ್ಕೆ ಹೋಗುವವರು ಪ್ರತಿದಿನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಒಂದು ಸಣ್ಣ ಸರ್ಕಲ್, ಸ್ಪೀಡ್ ಬ್ರೇಕರ್, ಸೂಚನಾ ಫಲಕ ಇದ್ದರೂ ಬಹಳಷ್ಟು ಅಪಘಾತಗಳನ್ನು ತಪ್ಪಿಸಬಹುದು ಎಂದು ಜನರು ಹೇಳುತ್ತಿದ್ದಾರೆ.

ಆದ್ದರಿಂದ ಮಹಾನಗರ ಪಾಲಿಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಮಾರ್ಗೇಟ್ ಬಳಿ ವೈಜ್ಞಾನಿಕವಾಗಿ ಸರ್ಕಲ್ ನಿರ್ಮಿಸಿ, ಜನರ ಜೀವ ರಕ್ಷಿಸಬೇಕು ಎಂದು ರಿಯಾಝ್ ಹರೇಕಳ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

About The Author

Leave a Reply