ಮಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಬಸ್ ನಿರ್ವಾಹಕನಿಗೆ ಇಬ್ಬರು ಅಪರಿಚಿತರು ಹಲ್ಲೆಗೈದು ಹಣವನ್ನು ದೋಚಿದ ಘಟನೆ ಸೋಮವಾರ ರಾತ್ರಿ ನಗರದ ಹೊರವಲಯದ ಹರೇಕಳದಲ್ಲಿ ನಡೆದಿದೆ.
ಹಲ್ಲೆಗೊಳಗಾದ ನಿರ್ವಾಹಕನನ್ನು ಆಲಡ್ಕ ನಿವಾಸಿ ಇಕ್ಟಾಲ್ ಎಂದು ಗುರುತಿಸಲಾಗಿದೆ ಗಾಯಾಳು ನಿರ್ವಾಹಕ ಸ್ಟೇಟ್ ಬ್ಯಾಂಕ್-ಹರೇಕಳ ಪಾವೂರು ಮಧ್ಯೆ ಚಲಿಸುವ ರೂಟ್ ನಂಬ್ರ 55ರ ಶ್ರೀ ಕಟೀಲ್ ಬಸ್‌ನಲ್ಲಿ ನಿರ್ವಾಹಕರಾಗಿದ್ದಾರೆ.
ಗಾಯಾಳು ನಿರ್ವಾಹಕ ರಾತ್ರಿ ಸುಮಾರು 8:45ಕ್ಕೆ ಕೊನೆಯ ಟ್ರಿಪ್ ಮುಗಿಸಿ ತನ್ನ ಮನೆಗೆ ಹೋಗುತ್ತಿದ್ದಾಗ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಹಣ ಕಿತ್ತು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಬಸ್ ನಿರ್ವಾಹಕನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾದ ಕೃತ್ಯವನ್ನು ರಾಣಿ ಅಬ್ಬಕ್ಕ ಬಸ್ ನೌಕರರ ಸಂಘ ಪೂರ್ವ ವಲಯದ ಅಧ್ಯಕ್ಷ ಅಲ್ತಾಫ್ ಖಂಡಿಸಿದ್ದಾರೆ.