ಮುಸ್ಲಿಮರು ನನ್ನ ಸಹೋದರರು ಎಂದಾಗ ಹಲವಾರು ಟೀಕೆಗಳು ಬಂತು, ಆದರೆ ಈ ಕನಕಪುರದ ಬಂಡೆ ಯಾವುದೇ ಟೀಕೆಗೆ ಹೆದರುವವನಲ್ಲ- ಡಿಕೆಶಿ

ಮಂಗಳೂರು : ಮುಸ್ಲಿಮರು ನನ್ನ ಸಹೋದರರು ಎಂದಾಗ ಹಲವಾರು ಟೀಕೆಗಳು ಬಂತು. ಆದರೆ ಈ ಕನಕಪುರದ ಬಂಡೆ ಯಾವುದೇ ಟೀಕೆಗೆ ಹೆದರುವವನಲ್ಲ ಎಂದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಕಣ್ಣೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಎಸ್ ವೈ ಎಸ್ ಸಂಘಟನೆಯ 30ನೇ ಮಹಾಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರಕಾರ ಮುಸ್ಲಿಮರ ಪರವಾಗಿ ನಿಂತುಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಿ ರಕ್ಷಣೆ ಕೊಡುವ ಜವಾಬ್ದಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ದೇಶದಲ್ಲಿದೆ. ಈ ದೇಶದಲ್ಲಿ ಮುಸ್ಲಿಮರ ಭಾವನೆ ಮೇಲೆ ರಾಜಕೀಯ ಮಾಡಲು ಒಂದು ಸರಕಾರ ಹೊರಟಿದೆ‌. ಆದರೆ ಕಾಂಗ್ರೆಸ್ ಮುಸ್ಲಿಮರ ಬದುಕಿನ ಮೇಲೆ ಬದಲಾವಣೆ ತರಲು ನಿಮಗೆ ಶಕ್ತಿಯನ್ನು ಕೊಡಲು ಹೊರಟಿದ್ದೇವೆ ಎಂದರು. ನೀವು ಹಲವಾರು ಹಕ್ಕೊತ್ತಾಯಗಳನ್ನು ಮಾಡಿದ್ದೀರಿ. ಆದರೆ ನೀವು ಒತ್ತಾಯ ಮಾಡಿರೋದು ಡಿ.ಕೆ.ಶಿವಕುಮಾರ್ ಗೆ ಅಲ್ಲ. ಸರ್ಕಾರವನ್ನು ಒತ್ತಾಯ ಮಾಡಿದ್ದು. ನಿಮ್ಮೊಂದಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತದೆ. ಚುನಾವಣೆ ಹತ್ತಿರ ಬರುತ್ತಿದೆ‌.‌ ಆದರೆ ನಾನು ಅದರ ಬಗ್ಗೆ ಮಾತನಾಡೋದಿಲ್ಲ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಡಿಕೆಶಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಪರೋಕ್ಷವಾಗಿ ತಿಳಿಸಿದರು

Leave a Reply

Your email address will not be published. Required fields are marked *