ಉಪ್ಪಿನಂಗಡಿ : ಮದ್ಯ ಸೇವಿಸಿ ಬಸ್ ಚಾಲನೆ- ಪ್ರಯಾಣಿಕರಿಂದ ತರಾಟೆ

ಉಪ್ಪಿನಂಗಡಿ : ಕೆಎಸ್ಸಾರ್ಟಿಸಿ ಚಾಲಕನೋರ್ವ ಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್ ಚಲಾಯಿಸಿ ಪ್ರಯಾಣಿಕರನ್ನು ಭಯಭೀತರನಾಗಿಸಿರುವ ಘಟನೆ ರವಿವಾರದ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಬಸ್ಸನ್ನು ಚಾಲಕ ಕಂಠಪೂರ್ತಿ ಕುಡಿದು ಯದ್ವಾತದ್ವ ಚಲಾಯಿಸಿದ ಪರಿಣಾಮವಾಗಿ ಪ್ರಯಾಣಿಕರೆಲ್ಲ ಭಯದಿಂದ ಚೀರಾಡತೊಡಗಿದ್ದಾರೆ, ಇದನ್ನು ಗಮನಿಸಿದ ಸ್ಥಳೀಯರು ಬಸ್ಸನ್ನು ನಿಲ್ಲಿಸಿ ಚಾಲಕನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

Leave a Reply