
ಪತ್ನಿ ಮೇಲೆ ಅನುಮಾನಗೊಂಡ ಪತಿ,ನಡುರಾತ್ರಿ ಕತ್ತುಹಿಸುಕಿ ಕೊ*ಲೆ ಮಾಡಿರುವ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಕ್ತನಪಾಳ್ಯದಲ್ಲಿ ನಡೆದಿದೆ.



ಸಲ್ಮಾ (30) ಕೊಲೆಯಾದ ಮಹಿಳೆ. ಇಮ್ರಾನ್(35) ಕೊ*ಲೆ ಮಾಡಿದ ಆರೋಪಿ.
ಇವರು ಮದುವೆಯಾಗಿ 6 ತಿಂಗಳಾಗಿತ್ತು. ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದ ದಂಪತಿ, ಕೆಲ ದಿನಗಳ ಹಿಂದೆ ನೆಲಮಂಗಲ ನಗರದ ಭಕ್ತನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಲ್ಮಾಳನ್ನು ಎರಡನೇ ಮದುವೆಯಾಗಿದ್ದ ಇಮ್ರಾನ್ ಕೆಲ ದಿನಗಳಿಂದ ಅನೈತಿಕ ಸಂಬಂಧದ ಬಗ್ಗೆ ಅನುಮಾನಗೊಂಡು ಗಲಾಟೆ ಮಾಡುತ್ತಿದ್ದನು. ಎನ್ನಲಾಗಿದ್ದು, ಭಾನುವಾರ ಮನೆಯಲ್ಲಿ ಮಲಗಿದ್ದಾಗ ತಡ ರಾತ್ರಿ 1.30ರಲ್ಲಿ ಕತ್ತುಹಿಸುಕಿ ಕೊ*ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ನೆಲಮಂಗಲ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.