ಮಂಗಳೂರು: ಪೊಲೀಸ್‌ ಠಾಣೆಯಲ್ಲಿ ಇಬ್ಬರು ಮಕ್ಕಳನ್ನು ಕೊಲ್ಲಲು ತಂದೆಯಿಂದ ಯತ್ನ ಪ್ರಕರಣ: ಆರೋಪಿಗೆ ನೀರಿಕ್ಷಣಾ ಜಾಮೀನು

ಮಂಗಳೂರು :ದಿನಾಂಕ 24.9.2023 ರಂದು ಮಧ್ಯ ರಾತ್ರಿ ವ್ಯಾಸನಗರ ವಾಸವಾಗಿರುವ ಗಂಡ ಹೆಂಡತಿ ಮಧ್ಯೆ ಜಗಳಕ್ಕೆ ಸಂಬಂಧಿಸಿದಂತೆ ಪ್ರಕರಣ ಮಂಗಳೂರು ಪೂರ್ವ ಪೋಲಿಸ್ ಠಾಣೆ ಮೇಟ್ಟಿಲೇರಿತು ಅಲ್ಲಿ ನಡೆದ ಸಂಸಾರಿಕಾ ವಿಷಯಕ್ಕೆ ಸಂಬಂಧ ಪಟ್ಟ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿ ಪಾನಮತ್ತ ತಂದೆಯೊಬ್ಬ ಪೊಲೀಸ್‌ ಠಾಣೆಯಲ್ಲಿ ಪೊಲೀಸರೆದುರೇ ಇಬ್ಬರು ಮಕ್ಕಳನ್ನು ಗೋಡೆಗೆ ತಳ್ಳಿ ಕೊಲೆಗೆ ಯತ್ನಿಸಿದಾಗಿ ಹಾಗೂ ಕರ್ತವ್ಯ ನಿರತ ಪೋಲಿಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುದಾಗಿ ಪ್ರಕರಣ ದಾಖಾಲಾಗಿರುತ್ತದೆ. 

ಸದ್ರಿ ಪ್ರಕರಣದ ಸತ್ಯ ಸತ್ಯತೆಗಳನ್ನು ಪರಿಸಿಲಿಸಿದ ಮಾನ್ಯ 2ನೇ ಹೆಚ್ಚು ವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು ವಾದ ಪ್ರತಿವಾದಗಳನ್ನು ಆಲಿಸಿ ಆರೋಪಿ ಗಂಡನಿಗೆ ನೀರಿಕ್ಷಣಾ ಜಾಮೀನು ನೀಡಿ ಆದೇಶಿಸಿದೆ, ಸದ್ರಿ IPC ಸೆಕ್ಷನ 307ರಲ್ಲಿ ಸುಮಾರು 2 ವರ್ಷಗಳಲ್ಲಿ ಇದೆ ಮೊದಲು ಒಬ್ಬ ಆರೋಪಿಗೆ ನೀರಿಕ್ಷಣಾ ಜಾಮೀನು ಮಂಜುರಾಗಿರುವುದು ವಿಶೇಷ ಅರ್ಹ, ಆರೋಪಿಯ ಪರವಾಗಿ ಯುವ ವಕೀಲ ವಿಮಲೇಶ್ ಆರ್. ಗೌಡ ಇವರು ವಾದ ಮಂಡಿಸಿದರು.

Leave a Reply