ತಾರಕ್ಕೇರಿದ ‘ಹನುಮಧ್ವಜ ದಂಗಲ್’: ‘BJP ಕಾರ್ಯಕರ್ತ’ರ ಮೇಲೆ ಪೊಲೀಸರಿಂದ ‘ಲಾಠಿ ಚಾರ್ಜ್’

ಧ್ವಜ ವಿವಾದ ತಾರಕ್ಕಕೇರಿದೆ. ಹನುಧ್ವಜ ದಂಗಲ್ ಬಿಜೆಪಿಯ ಪ್ರತಿಭಟನೆ ತಾರಕ್ಕೇರಿದ್ದು, ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮಹವೀರ್ ಸರ್ಕಲ್ ನಲ್ಲಿ ಹೈಡ್ರಾಮಾವೇ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರಿಂದ ಶಾಸಕ ಗಣಿಗ ರವಿ ಪ್ಲೆಕ್ ಹರಿದು ಹಾಕೋದಕ್ಕೆ ಯತ್ನಿಸಿದಂತ ವೇಳೆಯಲ್ಲಿ ವಾಗ್ವಾದ ನಡೆದು, ಪ್ರತಿಭಟನೆ ತೀವ್ರಗೊಂಡಿದೆ.

 

ಡಿಸಿ ಕಚೇರಿಯತ್ತ ತೆರಳುತ್ತಿರೋ ಹನುಮಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಚದುರಿಸೋದಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಪೊಲೀಸರು ನಡೆಸಿದಂತ ಲಾಠಿ ಚಾರ್ಜ್ ವೇಳೆಯಲ್ಲಿ ಪ್ರತಿಭಟನಾ ನಿರತ ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಮಂಡ್ಯದ ಡಿಸಿ ಕಚೇರಿಯ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Leave a Reply