ದಿನಾಂಕ 21 ಜನವರಿ 2022 ರಂದು ಮಂಗಳೂರು ನಗರದ ಕುಧ್ರೋಳಿಯ ಬಾಡಿಗೆ ಮನೆ ಒಂದರಲ್ಲಿ ಅಸ್ಸಾಂನ ಅಪ್ರಾಪ್ತ ಯುವತಿ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು ಯುವತಿಯ ಮನೆಯವರು ನೀಡಿದ ದೂರಿನ ಪ್ರಕಾರ ಶಹೀದ್ ಉಲ್ ಆಲಂ ಲಷ್ಕರ್ ಎಂಬ ಯುವಕನ ಮೇಲೆ ಅಸ್ಸಾಂ ರಾಜ್ಯದಿಂದ ಅಪ್ರಾಪ್ತ ಯುವತಿಯನ್ನು ಅಪಹರಿಸಿ, ಮಂಗಳೂರಿಗೆ ಕರೆತಂದು ಅತ್ಯಾಚಾರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ಮಾಡಿದ್ದಾನೆ ಎಂದು ಆತನ ಮೇಲೆ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಆತ್ಮಹತ್ಯೆಗೆ ಪ್ರೇರೇಪಣೆ ಮಾಡಿದ ಪ್ರಕರಣ ಮಂಗಳೂರಿನ ಬಂದರು ಠಾಣೆಯಲ್ಲಿ ದಾಖಲಾಗುತ್ತದೆ.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮಾನ್ಯ ಎರಡನೇ ಹೆಚ್ಚುವರಿ ಪೋಸ್ಕೋ ತ್ವರಿತ ನ್ಯಾಯಾಲಯ ಮಂಗಳೂರು ಸಾಕ್ಷಿಗಳ ವಿಚಾರಣೆಗಳು ನಡೆಸಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಇಟ್ಟಿ ಇವರು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿರುತ್ತಾರೆ, ಆರೋಪಿಯ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರಿನ ಯುವ ವಕೀಲರಾದ ಆಸಿಫ್ ಬೈಕಾಡಿ, ರುಬಿಯ ಅಕ್ತರ್, ಮಹಮ್ಮದ್ ಅಸ್ಗರ್ ಮುಡಿಪು, ಶ್ರೀನಿಧಿ ಪ್ರಕಾಶ್ ವಾದವನ್ನು ಮಂಡಿಸಿರುತ್ತಾರೆ.