ಮಂಗಳೂರು: ಬೀಚ್‌ನಲ್ಲಿ ನೀರುಪಾಲಾದ ಮೂವರು ಯುವಕರು

ಮಂಗಳೂರು:  ಪಣಂಬೂರು ಸಮುದ್ರ ತೀರದಲ್ಲಿ ವಿಹಾರಕ್ಕೆ ಆಗಮಿಸಿದ್ದ ಮೂವರು ಯುವಕರು ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಘಟನೆ ನಡೆದಿದೆ.

ಮಿಲನ್‌ (20 ವರ್ಷ), ಲಿಖಿತ್ (18) ಹಾಗೂ ನಾಗರಾಜ (24) ಸಮುದ್ರಪಾಲಾದವರು. ಅವರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಿಲನ್‌ ನಗರದಲ್ಲಿ ಮೀಷೊ ಕಂಪನಿಯ ಸರಕು ವಿತರಕನಾಗಿ ದುಡಿಯುತ್ತಿದ್ದರು. ಲಿಖಿತ್‌ ಕೈಕಂಬದ ರೋಸಾ ಮಿಸ್ಟಿಕಾ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ. ನಾಗರಾಜ್‌ ಅವರು ಬೈಕಂಪಾಡಿ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಎಂಎಂಆರ್‌ ಕಂಪನಿಯಲ್ಲಿ ಮೇಲ್ವಿಚಾರಕರಾಗಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದರು.

Leave a Reply