ಇಂದು ‘ಚಂದ್ರ ದರ್ಶನ’ ಹಿನ್ನಲೆ: ನಾಳೆಯಿಂದ ರಾಜ್ಯದ ಕರಾವಳಿಯಲ್ಲಿ ‘ರಂಜಾನ್ ಉಪವಾಸ ವ್ರತ’ ಆರಂಭ

ಮಂಗಳೂರು: ಇಂದು ಅಮವಾಸೆಯ ಹಿಂದಿನ ದಿನದಂದು ಚಂದ್ರನ ದರ್ಶನವಾಗಿದೆ. ಈ ಹಿನ್ನಲೆಯಲ್ಲಿ ನಾಳೆಯಿಂದ ರಾಜ್ಯದ ಕರಾವಳಿಯಲ್ಲಿ ರಂಜಾನ್ ಮಾಸ ಆರಂಭಗೊಳ್ಳಲಿದೆ.

ಇಂದು ಮಾಹಿತಿ ನೀಡಿರುವಂತ ಝೀನತ್ ಬಕ್ಷತ್ ಕೇಂದ್ರ ಜಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಆಗಿರುವಂತ ಎಸ್‌ಎಂ ರಶೀದ್ ಮಾಹಿತಿ ಹಂಚಿಕೊಂಡಿದ್ದಾರೆ.

ಕರಾವಳಿಯಲ್ಲಿ ಇಂದು ಚಂದ್ರನ ದರ್ಶನವಾಗಿದೆ. ಹೀಗಾಗಿ ಕರಾವಳಿಯಲ್ಲಿ ನಾಳೆಯಿಂದ ರಂಜಾನ್ ಮಾಸ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಕರಾವಳಿಯಲ್ಲಿ ನಾಳೆಯಿಂದ ರಂಜಾನ್ ವ್ರತ ಆರಂಭಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೂಡು ಸೇರಿದಂತೆ ಕರಾವಳಿಯಲ್ಲಿ ರಂಜಾನ್ ಉಪವಾಸ ವ್ರತವನ್ನು ಆಚರಣೆ ಮಾಡುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಇನ್ನೂ ರಾಜ್ಯದ ಕೆಲವೆಡೆ ಚಂದ್ರ ದರ್ಶನವಾಗದ ಕಾರಣ, ನಾಳೆ ಚಂದ್ರ ದರ್ಶನವನ್ನು ನೋಡಿಕೊಂಡು ರಂಜಾನ್ ಉಪವಾಸ ವ್ರತ ಆಚರಣೆಯ ಬಗ್ಗೆ ಮುಸ್ಲೀಂ ಸಮುದಾಯದಿಂದ ನಿರ್ಧಾರ ಕೈಗೊಳ್ಳೋ ಸಾಧ್ಯತೆ ಇದೆ.

Leave a Reply