ಕಡಬ: ಆ್ಯಸಿಡ್ ದಾಳಿ ಪ್ರಕರಣ; ಮತ್ತಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ಕಡಬ : ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಕಡಬಕ್ಕೆ ಕರೆತಂದಿದ್ದಾರೆ.

ಮಾರ್ಚ್ 5 ರಂದು ಕಡಬದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಅಬೀನ್  ಎಂಬ ಎಂಬಿಎ ವಿದ್ಯಾರ್ಥಿ ಆಸಿಡ್ ಎರಚಿ ಬಂಧಿತನಾಗಿದ್ದ. ಆರೋಪಿಗೆ ಅಸಿಡ್ ಎಲ್ಲಿಂದ ಸಿಕ್ಕಿತು ಅನ್ನೋ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಕೇರಳದ ಎರ್ನಾಕುಲಂ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರು ವಶಕ್ಕೆ ಪಡೆದಿರುವವರಲ್ಲಿ ಒಬ್ಬಾತ ಆ್ಯಸಿಡ್ ಪೂರೈಕೆ ಮಾಡಿದ್ದರೆ, ಮತ್ತೋರ್ವ ವ್ಯಕ್ತಿ ಆರೋಪಿಗೆ ಸಮವಸ್ತ್ರ ಹೊಲಿದು ಕೊಟ್ಟಿದ್ದಾನೆ ಎನ್ನಲಾಗಿದೆ. ಇಬ್ಬರನ್ನೂ ಕಡಬಕ್ಕೆ ಕರೆ ತರಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply