ಮಂಗಳೂರು : ಮಹಿಳೆಗೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನ- ದೂರು

ಉಪ್ಪಿನಂಗಡಿ:ಮಹಿಳೆಯೊಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಚ್ಚಂಪಾಡಿ ಗ್ರಾಮದ ಅಲಂಗಾ ಮನೆ ನಿವಾಸಿ ರೋಸಮ್ಮ (66) ಹಲ್ಲೆಗೊಳಗಾದವರು. ನೆರೆ ಮನೆಯ ತೋಮಸ್ ಎಂ.ಎಂ. ಆರೋಪಿ. ಮೇಯಲು ಬಿಟ್ಟ ದನವನ್ನು ಕಟ್ಟಿ ಹಾಕಲೆಂದು ಹೋಗಿದ್ದ ವೇಳೆ ಆರೋಪಿ ತೋಮಸ್‌ ಅವಾಚ್ಯ ಪದಗಳಿಂದ ಮಾತನಾಡಿ ರೋಸಮ್ಮ ಮೇಲೆ ಹಲ್ಲೆ ನಡೆಸಿ, ಧರಿಸಿದ ಬಟ್ಟೆಯನ್ನು ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, ರಕ್ಷಿಸಲು ಬಂದ ಮಹಿಳೆಯ ಮಗನಿಗೆ ಕತ್ತಿಯನ್ನು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಹಾಗೂ ನನ್ನ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೀಡಾದ ರೋಸಮ್ಮರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Leave a Reply