ಶಾಸಕನಿಗೆ ಹನಿಟ್ರ್ಯಾಪ್ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು: ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರನ್ನು ಹನಿಟ್ರ್ಯಾಪ್ ಮಾಡಿ ಬ್ಲಾಕ್‍ಮೇಲ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎಂದು ಗುರುತಿಸಲಾಗಿದೆ. ಗ್ಯಾಂಗ್‍ನಲ್ಲಿ ಓರ್ವ ಯುವತಿ ಸಹ ಭಾಗಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪ್ರಭಾವಿಗಳನ್ನು ಸಂಪರ್ಕಿಸಿ ಅವರನ್ನು ಹಿಂಬಾಲಿಸುತ್ತಿದ್ದರು. ಬಳಿಕ ಅವರ ಮೊಬೈಲ್ ನಂಬರ್ ಪಡೆದು, ಅವರು ಉಳಿದುಕೊಂಡಿದ್ದ ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಿದ್ದರು. ಬಳಿಕ ವಿಐಪಿಗಳು ಖಾಲಿ ಮಾಡಿದ ರೂಮ್ ಬಾಡಿಗೆ ಪಡೆದು ಯುವತಿಯನ್ನು ಬಳಸಿಕೊಂಡು ಅದೇ ರೂಮ್‍ನಲ್ಲಿ ಹಿಡನ್ ಕ್ಯಾಮರ್ ಬಳಸಿ ವೀಡಿಯೋ ಚಿತ್ರಿಕರಿಸಿ ಪ್ರಭಾವಿಗಳಿಗೆ ತಮ್ಮದೇ ವೀಡಿಯೋ ಎಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಶಾಸಕ ಹರೀಶ್ ಗೌಡ ಅವರಿಗೂ ಆರೋಪಿಗಳು ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದರು. ಹರೀಶ್ ಗೌಡ ದೂರಿನ ಅನ್ವಯ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

 

Leave a Reply