February 21, 2026
WhatsApp Image 2023-12-25 at 9.51.45 PM

ಮೈಸೂರಿನಲ್ಲಿ ಧಾರ್ಮಿಕ ಕಾರ್ಯಕ್ರಮಒಂದರಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಮ್ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ಆ ಮೂಲಕ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ , ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಮತೀಯ ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿರುತ್ತಾರೆ.

 

ಪೊಲೀಸರು,ಸರಕಾರ ಮತ್ತು ಜಿಲ್ಲಾಡಳಿತ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾನೂನು ಪ್ರಕರಣ ದಾಖಲು ಗೊಳಿಸಬೇಕು. ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಸರ್ಕಾರ ಮತ್ತು ಪೊಲೀಸರೇ ಹೊಣೆ. ಕಲ್ಲಡ್ಕ ಭಟ್ಟರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸು ಸ್ಟೇಶನ್ ನಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ನಿಯೋಗದಲ್ಲಿ ಅಬ್ದುಲ್ ಜಲೀಲ್,ಅಶ್ರಫ್ ಬದ್ರಿಯಾ, ಸಾಲಿಹ್ ಬಜ್ಪೆ, ಹಿದಾಯತ್ ಮಾರಿಪಲ್ಲ,ಹಿದಾಯತ್ ಕೃಷ್ಣಾಪುರ,ಮೊಹಮ್ಮದ್ ಹನೀಫ್.ಯು, ವಿ.ಏಚ್. ಕರೀಮ್, ಸೋಶಿಯಲ್ ಫಾರೂಕ್ ಮತ್ತಿತರು ಉಪಸ್ಥಿತರಿದ್ದರು.

About The Author

Leave a Reply