
ಉಳ್ಳಾಲ: ಮದುವೆಯಾಗುವುದಾಗಿ ನಂಬಿಸಿ ಉಳ್ಳಾಲ ತಾಲೂಕಿನ ಕುಂಪಲದ ಬಾಡಿಗೆ ಮನೆಯಲ್ಲಿ ದಲಿತ ಅಪ್ರಾಪ್ತೆಯನ್ನ ನಾಲ್ಕು ತಿಂಗಳಿನಿಂದ ನಿರಂತರ ಅತ್ಯಾಚಾರಗೈದ ಮೂಡಿಗೆರೆಯ ಮುಸ್ಲಿಮ್ ಯುವಕನನ್ನ ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ, ಅಣಜೂರು ಗ್ರಾಮದ ನಿವಾಸಿ ರಾಝೀನ್(25)ಬಂಧಿತ ಆರೋಪಿ.ರಾಝೀನ್ ತನ್ನದೇ ಗ್ರಾಮದ 17ರ ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನ ಪ್ರೀತಿಸುವ ನಾಟಕವಾಡಿ ನಾಲ್ಕು ತಿಂಗಳ ಹಿಂದೆ ಆಕೆಯನ್ನ ಕುಂಪಲ ಬೈಪಾಸಿಗೆ ಕರೆಸಿಕೊಂಡಿದ್ದ. ಅಲ್ಲಿಂದ ತನ್ನ ರಿಕ್ಷಾದಲ್ಲಿ ಕುಂಪಲದ ಬಾಡಿಗೆ ಮನೆಯೊಂದಕ್ಕೆ ಕರೆದೊಯ್ದು ಮದುವೆಯಾಗೋದಾಗಿ ನಂಬಿಸಿ ನಿರಂತರ ಅತ್ಯಾಚಾರಗೈದಿದ್ದಾನೆ. ಊರಲ್ಲಿ ಅಜ್ಜಿಯ ಪಾಲನೆಯಲ್ಲಿದ್ದ ಅಪ್ರಾಪ್ತೆಯು ರಾಝೀನ್ ಮಾತನ್ನ ನಂಬಿ ಕುಂಪಲದ ಬಾಡಿಗೆ ಮನೆಯಲ್ಲೇ ದಿಕ್ಕು ತೋಚದೆ ವಾಸಿಸುತ್ತಿದ್ದಳು. ಅನುಮಾನಗೊಂಡ ಬಜರಂಗದಳದ ಕಾರ್ಯಕರ್ತರು ಜೋಡಿಯನ್ನ ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದರು. ಬಾಲಕಿಯರ ಬಾಲ ಮಂದಿರದಲ್ಲಿ ಅಪ್ರಾಪ್ತೆಯು ನೀಡಿರುವ ಹೇಳಿಕೆಯಿಂದ ಸತ್ಯಾಂಶ ಬೆಳಕಿಗೆ ಬಂದಿದೆ. ಆರೋಪಿ ರಾಝೀನ್‌ನನ್ನು ಉಳ್ಳಾಲ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.


