ಕಾಸರಗೋಡು : ಎರಡು ತಿಂಗಳ ಗರ್ಭಿಣಿ ಮೃತ್ಯು..!

ಕಾಸರಗೋಡು : ಉಸಿರಾಟ ಮತ್ತು ತೀವ್ರ ಹೊಟ್ಟೆ ನೋವಿನಿಂದ ಎರಡು ತಿಂಗಳ ಗರ್ಭಿಣಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಳಚನದುಕ್ಕಂ ಮೂಲದ ಸಿದ್ದಿಕ್ ಎಂಬವರ ಪತ್ನಿ ಫೌಜಿಯಾ (35) ಮೃತ ದುರ್ದೈವಿ. ಎರಡು ತಿಂಗಳ ಗರ್ಭಿಣಿಯಾಗಿರುವ ಫೌಜಿಯಾ ಕಾಞಂಗಾಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿ ತೀವ್ರ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಯಿಂದ ಮಂಗಳೂರಿಗೆ ಕರೆದೊಯ್ಯಲಾಯಿತು. ಉಪ್ಪಳ ತಲುಪಿದಾಗ ಪರಿಸ್ಥಿತಿ ಬಿಗಡಾಯಿಸಿತು. ನಂತರ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಆಗಲೇ ಸಾವು ಸಂಭವಿಸಿತ್ತು. ಫೌಜಿಯಾ ಹಮೀದ್ ಮತ್ತು ಖದೀಜಾ ದಂಪತಿಯ ಪುತ್ರಿ. ಓರ್ವ ಮಗ ಮತ್ತು ಪತಿಯನ್ನು ಅಗಲಿದ್ದಾರೆ.

Leave a Reply