
ಹಾಸನದಲ್ಲಿ ತಾಯಿ ಹಾಗೂ ಇಬ್ಬರ ಮಕ್ಕಳ ಸಾವು ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಪ್ರಯಕರನಿಂದಲೇ ತಾಯಿ ಹಾಗೂ ಇಬ್ಬರ ಮಕ್ಕಳ ಹತ್ಯೆಯಾಗಿದೆ ಎಂದು ಪೋಲೀಸರ ತನಿಖೆಯ ವೇಳೆ ಬಯಲಾಗಿದೆ.



ಜನೆವರಿ 1 ರಂದು ಹಾಸನದಲ್ಲಿ ತಾಯಿ ಹಾಗೂ ಇಬ್ಬರ ಮಕ್ಕಳನ್ನು ಹತ್ಯೆಗೈಯ್ದಿದ್ದ ವಿಜಯಪುರ ಮೂಲದ ನಿಂಗಪ್ಪ ಕಾಗವಾಡನನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪತಿ ಇಲ್ಲದ ವೇಳೆ ಹಣಕ್ಕಾಗಿ ಶಿವಮ್ಮ ಹಾಗೂ ಇಬ್ಬರು ಮಕ್ಕಳನ್ನು ನಿಂಗಪ್ಪ ಹತ್ಯೆ ಮಾಡಿದ ಎಂದು ತಿಳಿದುಬಂದಿದೆ.
ತಾಯಿ ಶಿವಮ್ಮ ಮಕ್ಕಳದ ಪವನ್ (10)ಹಾಗೂ ಸಿಂಚನ (8) ಹತ್ಯೆಗೀಡಾದ ದುರ್ದೈವಿಗಳು.ಕಾರು ಚಾಲಕನೆಂದು ನಿಂಗಪ್ಪನನ್ನು ಪರಿಚಯ ಮಾಡಿಕೊಂಡಿದ್ದ ಶಿವಮ್ಮ. ವಿಜಯಪುರದಲ್ಲಿ ಶಿವಮಮ್ಮ ಪತಿ ತೀರ್ಥ ಪ್ರಸಾದ್ ಬೇಕರಿ ಇಟ್ಟಿದ್ದರು.ಬೇಕರಿ ಲಾಸ್ ಆಗಿದ್ದರಿಂದ ತೀರ್ಥಪ್ರಸಾದ್ ಅದನ್ನ ಮುಚ್ಚಿ ವಾಪಸ್ ಬಂದಿದ್ದರು.ಬಳಿಕ ತುಮಕೂರು ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥ ಪ್ರಸಾದ ಕೆಲಸ ಮಾಡುತ್ತಿದ್ದರು.
ಈ ವೇಳೆ ಆರೋಪಿ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದ ಇದ್ದಳು ಎನ್ನಲಾಗುತ್ತಿದ್ದು, ಹೊಸ ವರ್ಷಚರಣೆಗಾಗಿ ಶಿವಮ್ಮ ನಿಂಗಪ್ಪನನ್ನು ಕರೆಸಿಕೊಂಡಿದ್ದಳು ಎನ್ನಲಾಗಿದೆ.ಈ ವೇಳೆ ಶಿವಮ್ಮ ಮಕ್ಕಳದ ಸಿಂಚನ ಪವನ್ ನನ್ನು ನಿಂಗಪ್ಪ ಹತ್ಯೆಗೈದಿದ್ದಾನೆ.
ನಂತರ ಮೊಬೈಲ್ ತಾಳಿಸರದೊಂದಿಗೆ ಆರೋಪಿ ನಿಂಗಪ್ಪ ಪರಾರಿಯಾಗಿದ್ದ.ಅನಿಲ ಸೋರಿಕೆಯಿಂದ ಸಾವು ಎಂದು ಬಿಂಬಿಸಲು ಪ್ಲಾನ್ ಕೂಡ ಮಾಡಿದ್ದ ಎಂದು ವಿಚಾರಣೆ ವೇಳೆ ಬಹಿರಂಗವಾಗಿದೆ. ಜನವರಿ 1ರ ಸಂಜೆ ಶಿವಮ ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿ ನಿಂಗಪ್ಪನನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ