Visitors have accessed this post 262 times.

ಮಂಗಳೂರು : ಯುವನಿಧಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

Visitors have accessed this post 262 times.

ಮಂಗಳೂರು :ರಾಜ್ಯ ಸರಕಾರದ ಐದನೇ ಗ್ಯಾರಂಟಿ ಭರವಸೆಗೆ ನೋಂದಣಿ ಆರಂಭವಾಗಿದೆ. 2023-24ನೇ ಸಾಲಿನ ಯಾವುದೇ ವೃತ್ತಿಪರ ಕೋರ್ಸ್, ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ ಆರು ತಿಂಗಳಲ್ಲಿ ಉದ್ಯೋಗ ಸಿಗದವರಿಗೆ ಈ ಯೋಜನೆ ಅನ್ವಯವಾಗಲಿದೆ.

ಮುಂದಿನ 2 ವರ್ಷ ಪದವೀಧರರಿಗೆ ಮಾಸಿಕ 3000 ರೂ.ಮತ್ತು ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ 1500 ರೂ.

ನಿರುದ್ಯೋಗ ಭತ್ತೆ ನೀಡಲಾಗುತ್ತಿದೆ. ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ.

ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ರಾಜ್ಯದಲ್ಲಿ ಆರು ವಷರ್ ವಾಸಿಸಿ, ಪದವಿ ಅಥವಾ ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು ಅರ್ಜಿ ಸಲ್ಲಿಸಬಹುದು. ಆರು ವರ್ಷಗಳ ವಾಸವಿರುವುದನ್ನು ಪರಿಶೀಲಿಸಲಾಗುತ್ತದೆ.

*ಎಸೆಸೆಲ್ಸಿ ಅಂಕಪಟ್ಟಿ/ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಅಂಕ ಪಟ್ಟಿಗಳು ಅಥವಾ ಎಸೆಸೆಲ್ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ.

*ಸಾಮಾನ್ಯ ಪ್ರವೇಶ ಪರೀಕ್ಷೆ, ಸಿಇಟಿ ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣ ಪತ್ರ ಅಥವಾ ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ.

*ಎನ್‌ಐಒಎಸ್( ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನೀಡಿದ ಎಸೆಸೆಲ್ಸಿ ಅಂಕಪಟ್ಟಿಯನ್ನು ಸಹ ವಾಸಸ್ಥಳ ಪರಿಶೀಲನೆಗಾಗಿ ಪರಿಗಣಿಸಲಾಗುತ್ತದೆ.

*ಅಭ್ಯರ್ಥಿಯ ಪದವಿ ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು ನ್ಯಾಷನಲ್ ಅಕಾಡಮಿ ಡಿಪೋಸಿಟ್ರಿ (NAD) ಯಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು.

ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೊದಲು ಡಿಜಿ ಲಾಕರ್‌ನಲ್ಲಿ ಡಿಜಿ ಲೋಕಲ್ ಖಾತೆಯನ್ನು ಸೃಜಿಸುವ ಮೂಲಕ ತಮ್ಮ ನ್ಯಾಷನಲ್ ಅಕಾಡಮಿಕ್ ಡಿಪೋಸಿಟ್ರಿ ಪ್ರಮಾಣ ಪತ್ರವನ್ನು ಪಡೆದಿರುವುದು ಖಚಿತಪಡಿಸಿ ಕೊಳ್ಳಲಾಗುವುದು.

*ಸೇವಾ ಸಿಂಧುವಿನಲ್ಲಿ sevasindhugs.karnataka.gov.in ಲಾಗಿನ್ ಆಗಿ ಸ್ವತಃ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.

* ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು ಡಿಬಿಟಿ ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆಧಾರ್ ಹಾಗೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

*ನಿರುದ್ಯೋಗದ ಬಗ್ಗೆ ಸ್ವಯಂ ಘೋಷಿಸಬೇಕು, ಉದ್ಯೋಗ ಪಡೆದ ನಂತರ ತಪ್ಪುಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.

*ಅಭ್ಯರ್ಥಿಗಳು ಅರ್ಜಿ ಹಾಕುವಾಗ ಉತ್ತೀರ್ಣರಾದ ದಿನದಂದು ಆರು ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆ ವಹಿವಾಟು ಸ್ಟೇಟ್‌ಮೆಂಟ್ ಪ್ರತಿ ನೀಡಬೇಕು.

*ಪದವಿ, ಡಿಪ್ಲೋಮಾ ಬಳಿಕ ಉನ್ನತ ಶಿಕ್ಷಣ ಮುಂದುವರಿಸಿದರೆ ಈ ಭತ್ತೆಗೆ ಅರ್ಹರಾಗುವುದಿಲ್ಲ.

ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ, ಪದವಿ ಪ್ರಮಾಣ ಪತ್ರ, ಡಿಪ್ಲೋಮಾ ಹೊಂದಿದ್ದರೆ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ನೀಡಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಮತ್ತು ಅದರ ಮಾಹಿತಿ ಅಗತ್ಯವಿದೆ. ಯಾವುದೇ ಅಪ್ರೆಂಟಿಸ್ ತರಭೇತಿಯನ್ನು ವೇತನದೊಂದಿಗೆ ಪಡೆಯುತ್ತಿರುವವರು, ಸರಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವರು, ಸರಕಾರದ ನಾನಾ ಯೋಜನೆಗಳಡಿ ಬ್ಯಾಂಕ್ ಸಾಲ ಪಡೆದು ಸ್ವಉದ್ಯೋಗ ಆರಂಭಿಸಿದವರು ಈ ಯೋಜನೆಗೆ ಅರ್ಹರಾಗುವುದಿಲ್ಲ.

*ಜ.8 ಮತ್ತು 9ರಂದು ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ಡಿಪ್ಲೊಮಾ ಶಿಕ್ಷಣ ಸಂಸ್ಥೆಗಳಲ್ಲಿ ಯುವನಿಧಿ ನೋಂದಣಿ ಅಭಿಯಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *