October 24, 2025
WhatsApp Image 2024-01-08 at 10.15.26 AM

ಬೆಂಗಳೂರು : ಯಜಮಾನಿಯರಿಗೆ ‘ರಾಜ್ಯ ಸರ್ಕಾರ’ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಸರ್ಕಾರ ನಯಾಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳ ಮಾದರಿಯ ನಯಾ ಚಿಟ್ ಫಂಡ್ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.

ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್ಫಂಡ್ ಉನ್ನತೀಕರಣಕ್ಕೆ ಸರ್ಕಾರ ಸಿದ್ದತೆ ನಡೆಸಿದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳಿಗೆ ನೀಡುತ್ತಿರುವ 2 ಸಾವಿರ ಹಣವನ್ನು ಸರ್ಕಾರ ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡುವ ಯೋಜನೆ ತರುತ್ತಿದೆ.

ಜೀವ ವಿಮಾ ನಿಗಮ (ಎಲ್‌ಐಸಿ) ಯಂತೆಯೇ ಇದು ಕಾರ್ಯ ನಿರ್ವಹಿಸಲಿದ್ದು, ಸರ್ಕಾರ ಏಜೆಂಟರನ್ನು ನಿಯೋಜಿಸಲಿದೆ. ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್ ಫಂಡ್ ಉದ್ಯಮ ಬಲಪಡಿಸುವ ಗುರಿಯಿದೆ ಎನ್ನಲಾಗಿದೆ.

About The Author

Leave a Reply