November 8, 2025
WhatsApp Image 2024-01-08 at 1.07.28 PM

ಮಂಗಳೂರು: “ಜನವರಿ 10ರಂದು ನಗರದ ಪುರಭವನದಲ್ಲಿ ಶ್ರೀ ಲಲಿತೆ ಕಲಾವಿದರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತ್ರಿರಂಗ ಸಂಗಮ ಮುಂಬೈ ಸಂಚಾಲಕತ್ವದಲ್ಲಿ ಗರುಡ ಪಂಚಮಿ 50ರ ಪ್ರದರ್ಶನದ ಸಂಭ್ರಮ ಹಾಗೂ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ ರಂಗ ಕಲಾಬಂಧು ಬಿರುದು ಪ್ರದಾನ ನಡೆಯಲಿದೆ” ಎಂದು ತಂಡದ ಸಂಚಾಲಕ ಲಯನ್ ಡಿ. ಕಿಶೋರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸಣ್ಣ ವಹಿಸಲಿದ್ದು, ಮೇಯರ್ ಸುಧೀರ್ ಶೆಟ್ಟ ಕಣ್ಣೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕೋಶಾಧಿಕಾರಿ ಸಿಎ ಸುದೇಶ್ ರೈ, ಜನನಿ ಕನ್ ಸ್ಟ್ರಕ್ಷನ್ ಮಾಲಕ ಸುಧಾಕರ್ ಪೂಂಜ, ಹೋಟೆಲ್ ಉದ್ಯಮಿ ಶಶಿಕಾಂತ ಶೇಖ, ಲ. ಚಂದ್ರಹಾಸ್ ಶೆಟ್ಟಿ, ಲೀಲಾಕ್ಷ ಕರ್ಕೇರ, ಲ. ಸ್ವರೂಪ ಎನ್. ಶೆಟ್ಟಿ, ಲ. ತಾರನಾಥ ಶೆಟ್ಟಿ ಬೋಳಾರ್, ನವೀನ್ ಶೆಟ್ಟಿ ಅಳಕೆ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.
“ಇದೇ ಸಂದರ್ಭದಲ್ಲಿ ತ್ರಿರಂಗ ಸಂಗಮ ಮುಂಬೈ ಇದರ ಸಂಚಾಲಕರಾದ ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ, ಕರ್ನೂರು ಮೋಹನ್ ರೈ ಅವರನ್ನು ಸನ್ಮಾನಿಸಲಾಗುವುದು” ಎಂದು ಕದ್ರಿ ನವನೀತ್ ಶೆಟ್ಟಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ ಡಿ.ಕಿಶೋರ್ ಶೆಟ್ಟಿ, ನಾಟಕ ರಚನೆಕಾರ ಜೀವನ್ ಉಳ್ಳಾಲ್, ಮೋಹನ್ ಕೊಪ್ಪಲ, ಕದ್ರಿ ನವನೀತ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಯಾದವ ಮಣ್ಣಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply