Visitors have accessed this post 2418 times.
ಗೃಹಿಣಿಯರು 5ನೇ ಕಂತಿನ ಹಣ ತನ್ನ ಖಾತೆಗೆ ಬರಬೇಕು ಎಂದಾದರೆ, ಕಡ್ಡಾಯವಾಗಿ ಈ ಕೆ ವೈ ಸಿ ಮಾಡಿಸಿಕೊಳ್ಳಲೇಬೇಕು. ಈಗಾಗಲೇ ಸರ್ಕಾರ ಹೊರಡಿಸಿರುವ ಮತ್ತೊಂದು ಸುತ್ತೋಲೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾರ ಹೆಸರಿಗೆ ತೆರೆಯಲಾಗಿದೆಯೋ ಅವರ ಖಾತೆಗೆ ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿಯೊಬ್ಬ ಸದಸ್ಯರು ಕೂಡ ಕೆವೈಸಿ (E-KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಇಕೆವೈಸಿ ಆಗಿದ್ಯೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ?
- ಮೊದಲು https://ahara.kar.nic.in/Home/EServices ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಮೂರನೇ ಆಯ್ಕೆಯಾಗಿರುವ ಈ ಸ್ಥಿತಿಯನ್ನು ಆಯ್ಕೆ ಮಾಡಿ.
- ಈ ಸ್ಥಿತಿ ಮೇಲೆ ಕ್ಲಿಕ್ (click) ಮಾಡಿದ ನಂತರ, ಹೊಸ ಅಥವಾ ಚಾಲ್ತಿಯಲ್ಲಿರುವ ರೇಷನ್ ಕಾರ್ಡ್ (Ration Card) ತಿದ್ದುಪಡಿ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದರೆ ನಿಮಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮೂರು ಲಿಂಕ್ ಗಳನ್ನು ಕಾಣಬಹುದು. ಆ ಲಿಂಕ್ ಗಳ ಕೆಳಗೆ ಕೊಡಲಾಗಿರುವ ಜಿಲ್ಲೆಗಳನ್ನು ನೋಡಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಓಟಿಪಿ ಅಥವಾ ವಿಥೌಟ್ ಓಟಿಪಿ (without OTP) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.
- ವಿಥ್ ಓಟಿಪಿ ಎಂದು ಆಯ್ಕೆ ಮಾಡಿಕೊಳ್ಳಿ. ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿದ್ರೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ನಂತರ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ನಮೂದಿಸಿ, ಗೊ (GO) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಯಾರ ಹೆಸರಿಗೆ ಈಕೆವೈಸಿ ಆಗಿದೆ, ಎಂಬುದನ್ನು ಚೆಕ್ ಮಾಡಲು ಸದಸ್ಯರ ಹೆಸರಲ್ಲಿ ಯಾರ ಹೆಸರು ಬೇಕೋ ಆ ಹೆಸರನ್ನು ಆಯ್ಕೆ ಮಾಡಿ.
- ಬಳಿಕ ನಿಮ್ಮ ಆಯ್ಕೆಯ ಹೆಸರಿಗೆ, ಉಳಿದ ಸದಸ್ಯರ ಹೆಸರಿಗೆ ಕೆವೈಸಿ ಆಗಿದೆಯೋ ಇಲ್ಲವೋ ಎಂದು ತಿಳಿಯಬಹುದು. ಆಗಿದ್ದರೆ ಎಸ್ ಎನ್ನುವ ಸಂದೇಶ ಕಾಣುತ್ತೀರಿ.
ಈ ರೀತಿ ನೀವು ಕೆವೈಸಿ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ನಿಮ್ಮ ಕೆವೈಸಿ ಆಗದೇ ಇದ್ದರೆ, ಬ್ಯಾಂಕ್ (Bank) ಗೆ ಹೋಗಿ ಕೂಡಲೇ ಈ ಕೆ ವೈ ಸಿ, ಮಾಡಿಸಿಕೊಳ್ಳಿ. ಒಂದು ವೇಳೆ ಕೆವೈಸಿ ಆಗದೆ ಇದ್ದರೆ, ಮುಂದಿನ ತಿಂಗಳ ಗೃಹ ಲಕ್ಷ್ಮಿ ಹಣ ಫಲಾನುಭವಿ ಮಹಿಳೆಯ ಖಾತೆಗೆ ಬರುವುದಿಲ್ಲ ಎಂದು ತಿಳಿದು ಬಂದಿದೆ.