October 23, 2025
WhatsApp Image 2024-01-09 at 5.50.11 PM

ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಭಾಷಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರೀಶ್ ಪೂಂಜಾ ಹೇಳಿಕೆ ವೈರಲ್ ಆಗಿದೆ. ಮುಸ್ಲಿಮರ ಜನಸಂಖ್ಯೆ 80 ಕೋಟಿ ಆಗಿ, ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತೆ..?

ಹಿಂದೂಗಳೆಲ್ಲಾ ಮನೆಯಲ್ಲಿ ಕುಳಿತು ಯೋಚನೆ ಮಾಡಿ ಎಂದಿದ್ದಾರೆ.

ಮುಸ್ಲಿಮರು ನಾಲ್ಕೈದು ಮಕ್ಕಳು ಹೆರುತ್ತಿದ್ದಾರೆ. ನಮ್ಮಲ್ಲಿ ಒಂದು ಅಥವಾ ತಪ್ಪಿದ್ರೆ ಎರಡು ಮಕ್ಕಳನ್ನು ಹೆರಲಾಗುತ್ತಿದೆ. ಹಿಂದೂಗಳ ಜನಸಂಖ್ಯೆ ಕಡಿಮೆ ಆದ್ರೆ ನಮ್ಮ ದೇಶದಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರುತ್ತೆ..? ಯೋಚನೆ ಮಾಡಿ ಎಂದಿದ್ದಾರೆ. ಮುಸ್ಲಿಮರು 4-5 ಮಕ್ಕಳು ಮಾಡುವಾಗ, ಹಿಂದುಗಳು 1-2 ಮಾಡ್ಕೊಂಡ್ರೆ ಸಾಕಾಗಲ್ಲ. ಅವರು ಇರೋದು 20 ಕೋಟಿ ಅಂತಾ ಹೇಳುತ್ತಾರೆ. ದೇಶದಲ್ಲಿರುವ 20 ಕೋಟಿ ಮುಸ್ಲಿಮರಿಗೆ ನಾಲ್ಕು ನಾಲ್ಕು ಮಕ್ಕಳು ಆದ್ರೆ ಎಷ್ಟಾಗುತ್ತೆ?ʼʼ ಎಂದು ಕೇಳಿದ ಅವರು, ಅವರ ಜನಸಂಖ್ಯೆ 80 ಕೋಟಿ ಆಗುತ್ತದೆ ಎಂದರು. ಭಾರತದಲ್ಲಿ ಮುಸ್ಲಿಂಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದುಗಳ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ ಎಂದು ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.

About The Author

Leave a Reply