
‘ನೈತಿಕ ಪೊಲೀಸ್ ಗಿರಿ’ ನಡೆದ ಘಟನೆ ಬೆಳಕಿಗೆ ಬಂದಿದ್ದು, ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಹಿಂದೂ ವ್ಯಕ್ತಿ, ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ.



ಹಾವೇರಿ ಜಿಲ್ಲೆಯ ಹಾನಗಲ್ ಖಾಸಗಿ ಹೋಟೆಲ್ ಗೆ ನುಗಿದ ಯುವಕರ ಗುಂಪೊಂದು ವಿವಾಹಿತ ಮಹಿಳೆ ಜೊತೆಗಿದ್ದ ವ್ಯಕ್ತಿಗೆ ಥಳಿಸಿದೆ.
ಹೋಟೆಲ್ ರೂನಲ್ಲಿ ತಂಗಿದ್ದಂತ ಹಿಂದೂ-ಮುಸ್ಲೀಂ ಜೋಡಿಯ ಮೇಲೆ ಹಲ್ಲೆ ನಡೆಸಲಾಗಿದೆ.
ಮುಸ್ಲಿಂ ಮಹಿಳೆ ಜೊತೆ ಅನ್ಯಕೋಮಿನ ಯುವಕ ಇದ್ದಾನೆ ಎಂದು ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದೆ. ಇಬ್ಬರ ಮೇಲೂ ಯುವಕರು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬುರ್ಖಾ ಹಾಕೊಂಡು ಬಂದು ಇಲ್ಲಿ ಮಲಗಿದ್ದೀಯಾ..? ನಿನಗೆ ನಮ್ಮ ಹುಡುಗಿನೆ ಬೇಕಾ ಎಂದು ಯುವಕರು ಹೇಳುತ್ತಾ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ.