August 30, 2025
WhatsApp Image 2024-01-11 at 4.01.15 PM

ಬೆಂಗಳೂರು: ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿರುವ ಸುಚನಾ ಸೇಠ್ , ತನ್ನ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ತನ್ನ ಮಗ ತನ್ನ ಪತಿ ವೆಂಕಟರಮಣ್‌ ನನ್ನು ಹೋಲುವುದರಿಂದ ದೂರವಾಗಿರುವ ನನ್ನ ಮತ್ತು ಪತಿಯ ಸಂಬಂಧವನ್ನು ನೆನಪಿಸುತ್ತದೆ ಎಂದು ಹೇಳಿದ್ದರು ಎಂಬುದಾಗಿ ವರದಿಯಾಗಿದೆ.

ಪ್ರಕರಣದ ತನಿಖೆಗಳು ಆಳವಾಗುತ್ತಿದ್ದಂತೆ, ವೆಂಕಟರಮಣ್‌ ಸುಚನಾಗೆ ಕರೆ ಮಾಡಿ ತಮ್ಮ ಮಗನನ್ನು ಭೇಟಿಯಾಗಲು ಬಯಸಿರುವುದಾಗಿ ತಿಳಿಸಿದ್ದು, ಅದಕ್ಕಾಗಿ ಭಾನುವಾರ ಬೆಂಗಳೂರಿನಲ್ಲಿರುವ ತನ್ನ ಮಗನನ್ನು ತನ್ನ ಮನೆಗೆ ಕರೆದುಕೊಂಡು ಬರುವಂತೆ ರಾಮನ್ ಹೇಳಿದ್ದರಂತೆ. ಆದರೆ ಸುಚನಾ ತನ್ನ ವಿಚ್ಛೇದಿತ ಗಂಡನ ಮನವಿಯನ್ನು ತಿರಸ್ಕರಿಸಿ, ಸಾರ್ವಜನಿಕ ಸ್ಥಳದಲ್ಲಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಳಂತೆ.

ಇನ್ನು ಆಕೆಯ ಕೋರಿಕೆಯ ಮೇರೆಗೆ ರಮಣ್ ಸಾರ್ವಜನಿಕ ಸ್ಥಳದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾದು ಸುಚನಾಗೆ ಅನೇಕ ಹಲವಾರು ಬಾರಿ ಕರೆ, ಸಂದೇಶಗಳು ಮತ್ತು ಇಮೇಲ್‌ಗಳನ್ನು ಮಾಡಿದರೂ ಆಕೆ ಪ್ರತಿಕ್ರಿಯಿಸಲಿಲ್ಲ ಎಂದು ಆರೋಪಿಸಲಾಗಿದೆ.

ರಾಮನ್ ಕೆಲಸದ ನಿಮಿತ್ತ ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಸುಚನಾ ತನ್ನ ಪತಿ ಮಗನನ್ನು ಭೇಟಿಯಾಗದಂತೆ ನೋಡಿಕೊಳ್ಳಲು ಗೋವಾಕ್ಕೆ ಭೇಟಿ ನೀಡಿ ಅಲ್ಲಿ ಮಗುವನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

About The Author

Leave a Reply