October 23, 2025
WhatsApp Image 2024-01-18 at 11.48.38 AM

ಮಂಗಳೂರು:ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳೂರಿನ ಕಾವೂರು ಜಂಕ್ಷನ್ ನ ಕೆಐಒಸಿಎಲ್ ಕ್ವಾಟ್ರಸ್ ಮುಖ್ಯಗೇಟಿನ ಎದುರು ಮಂಗಳವಾರ ತಡರಾತ್ರಿ ನಡೆದಿದೆ.

ಬೈಕ್ ಸವಾರ ಕೆಐಒಸಿಎಲ್ ಉದ್ಯೋಗಿ, ಕುದುರೆಮುಖ ಶ್ರಮಶಕ್ತಿ ಸಂಘಟನೆಯ ಮುಖಂಡ ಶೇಖರಪ್ಪ (54) ಮೃತಪಟ್ಟ ದುರ್ದೈವಿ.
ಶೇಖರಪ್ಪ ಅವರು ಕರ್ತವ್ಯ ಮುಗಿಸಿ ಕ್ವಾಟ್ರಸ್ ಕಡೆಗೆ ಬರಲು ಮುಖ್ಯಗೇಟಿನ ಎದುರು ಇರುವ ಡಿವೈಡರ್ ಬಳಿ ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿಕೊಂಡು ನಿಂತಿದ್ದಾಗ ರಾತ್ರಿ ಸುಮಾರು 11.25ಕ್ಕೆ ಬೋಂದೆಲ್ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶೇಖರಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply