Visitors have accessed this post 274 times.
ಕಾಸರಗೋಡು: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಒಂದುವರೆ ವರ್ಷದ ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಎಳೆದುಕೊಂಡ ಹೋದ ಘಟನೆ ಕಾಸರಗೋಡುವಿನ ಪಡನ್ನ ಎಂಬಲ್ಲಿ ನಡೆದಿದೆ.
ಇಲ್ಲಿನ ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆ ಸಮೀಪದ ಫಾಬಿನಾ ಸುಲೈಮಾನ್ ದಂಪತಿ ಪುತ್ರ ಬಶೀರ್ ಮನೆ ಅಂಗಳದಲ್ಲಿ ಆಟವಾಡುತ್ತಿದ್ದಾಗ ನಾಯಿಗಳು ಎತ್ತಿಕೊಂಡು ಹೋಗಿವೆ.
ಮಗುವಿನ ಅಳು ಕೇಳಿ ಮನೆಯವರು ಬಂದಾಗ ನಾಯಿಗಳು ಮಗುವನ್ನು ಬಿಟ್ಟು ಪರಾರಿಯಾಗಿವೆ. ಮಗುವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಇದೇ ಪ್ರದೇಶದಲ್ಲಿ ಬೀದಿ ನಾಯಿಗಳು ಇಬ್ಬರು ಮಕ್ಕಳು ಓರ್ವ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ. ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.