Visitors have accessed this post 471 times.

ಮಂಗಳೂರು: SYS ಸಮ್ಮೇಳನದಲ್ಲಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ – ಹಿಜಾಬ್ ನಿಷೇಧ ಹಿಂಪಡೆಯಲು ತೀವ್ರ ಒತ್ತಾಯ

Visitors have accessed this post 471 times.

ಮಂಗಳೂರು: ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸುನ್ನಿ ಯುವಜನ ಸಂಘಂನ(ಎಸ್ ವೈ ಎಸ್) ನ 30ನೇ ಮಹಾ ಸಮ್ಮೇಳನದಲ್ಲಿ ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಂಡನೆ ಮಾಡಲಾಯಿತು. ರಾಜ್ಯ ವಕ್ಫ್ ಅಧ್ಯಕ್ಷ ಶಾಫಿ ಸ ಅ ದಿ ಹಕ್ಕೊತ್ತಾಯ ಮಂಡಿಸಿದರು. ಈ ವೇಳೆ ಹಿಜಾಬ್ ನಿಷೇಧ ಹಿಂಪಡೆಯಲು ತೀವ ಒತ್ತಾಯ ಕೇಳಿ ಬಂತು.

* ಹಿಂದಿನ ಸರಕಾರ ಪದವಿ ಕಾಲೇಜಿನೊಳಗೆ ನಿಷೇಧಿಸಿದ್ದ ಹಿಜಾಬ್ ನಿಯಮವನ್ನು ವಾಪಸ್ ಪಡೆಯಬೇಕು * ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ಶೇ.4ರಿಂದ ಶೇ.7ಕ್ಕೆ ಏರಿಸಬೇಕು. 2ಬಿ ಮೀಸಲಾತಿಯಲ್ಲಿ 4% ವಾಪಾಸ್ ಪಡೆದಿದ್ದ ಹಿಂದಿನ ಸರ್ಕಾರದ ಆದೇಶ ವಾಪಾಸ್ ಪಡೆಯಬೇಕು.

* 2013ರ ಜಾತಿಗಣತಿ ವರದಿ ಬಿಡುಗಡೆ ಮಾಡಲು ಒತ್ತಾಯ.

* ಮಂಗಳೂರು ಸಿಎಎ ಎನ್.ಆರ್.ಸಿ ಗಲಭೆಯಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ. ಈ ಸಂದರ್ಭದಲ್ಲಿ ಹಲವರ ಮೇಲಿನ ಹಾಕುರುವ ಕೇಸ್ ವಾಪಾಸ್ ಪಡೆಯಬೇಕು. ಜೊತೆಗೆ ಹುಬ್ಬಳ್ಳಿ, ಡಿ‌.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರ ತಕ್ಷಣ ಬಿಡುಗಡೆಯಾಗಬೇಕು.

* ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದಿರುವ ಸಮಿತಿಯಲ್ಲಿ ಏಕಪಕ್ಷೀಯ ನಿರ್ಧಾರ ಆಗಬಾರದು ಮುಸ್ಲಿಮರಿಗೂ ನ್ಯಾಯ ಸಿಗಬೇಕು

* ಮುಸ್ಲಿಮರಿಗೆ ಬಜೆಟ್‌ನಲ್ಲಿ 10 ಶೇಕಡಾ ಅನುದಾನ ನೀಡಬೇಕು.

Leave a Reply

Your email address will not be published. Required fields are marked *