ಟೇಕ್ವಾಂಡೋ ರಾಜ್ಯ ಮಟ್ಟದ ಸ್ಪರ್ಧೆ ಮೊನ್ನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಸ್ಪರ್ಧೆಗೆ ಕರ್ನಾಟಕದಿಂದ 600, ದಕ್ಷಿಣ ಕನ್ನಡ ಜಿಲ್ಲೆಯಿಂದ 67 ಸ್ಪರ್ಧಿಗಳಿದ್ದರು.
ಉಪ್ಪಿನಂಗಡಿ ಮಾಲಿಕುದ್ದಿನಾರ್ ಜುಮಾ ಮಸೀದಿಯ ಅಧೀನ ಸಂಸ್ಥೆಯಾದ ಇಂಡಿಯನ್ ಸ್ಕೂಲ್ ನ 19 ವಿದ್ಯಾರ್ಥಿಗಳು ಸ್ಪರ್ಧಾರ್ಥಿಗಳಾಗಿದ್ದರು. ಅವರಲ್ಲಿ ಐದು ಜನ ಚಿನ್ನ ಐದು ಜನ ಬೆಳ್ಳಿ ಎರಡು ಜನ ಕಂಚಿನ ಪದಕಗಳೊಂದಿಗೆ ವಿಜೇತರಾಗಿದ್ದಾರೆ. ಈ ಎಲ್ಲಾ ಸ್ಪರ್ಧಾರ್ಥಿಗಳನ್ನು ಉಬಾರ್ ಸ್ಪೋರ್ಟಿಂಗ್ ಕ್ಲಬ್ಬಿನ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಬಾರ್ ಸ್ಪೋರ್ಟಿಂಗ್ ಕ್ಲಬ್ಬಿನ ಅಧ್ಯಕ್ಷರಾದ ಶಬೀರ್ ಕೆಂಪಿಯವರು ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ವಿನ್ಸೆಂಟ್ ಫೆರ್ನಾಂಡಿಸ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾಲಕ್ಷ್ಮಿ ಪ್ರಭು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉಬಾರ್ ಸ್ಪೋರ್ಟಿಂಗ್ ಕ್ಲಬ್ಬಿನ ಸಲಹೆಗಾರರಾದ ತೌಸೀಫ್ ಯು ಟಿ, ಮತ್ತು ನಾಸೀರ್ ಗಾಂಧಿ ಪಾರ್ಕ್, ವಾಲಿಬಾಲ್ ಆಟಗಾರ ಹನೀಫ್ ನೆಕ್ಕಿಲಾಡಿಯವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸ್ಪರ್ಧಾರ್ಥಿಗಳು ತಮ್ಮ ಪಾಲಕರೊಂದಿಗೆ ಭಾಗವಹಿಸಿದ್ದರು. ಸಮಾರಂಭದಲ್ಲಿ ತರಬೇತುದಾರರಾದ ಶಿಹಾಬ್ ತಂಗಳ್ ಉಪ್ಪಿನಂಗಡಿಯವರನ್ನು ಸನ್ಮಾನಿಸಲಾಯಿತು. ಕ್ಲಬ್ಬಿನ ಸದಸ್ಯರಾದ ಶಬೀರ್ ನಂದಾವರ, ಮೊಹೀನ್ ನಟ್ಟಿಬೈಲು, ಇಬ್ರಾಹಿಂ ಸಿಟಿ ಫ್ಯಾನ್ಸಿ, ಫಯಾಝ್, ಸಿಯಾಕ್ ಕೆಂಪಿ ಮತ್ತು ರಿಯಾಝ್ ಉಪ್ಪಿನಂಗಡಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಇರ್ಷಾದ್ ಯು ಟಿ ನಡೆಸಿಕೊಟ್ಟರು.