November 8, 2025
WhatsApp Image 2024-01-27 at 3.06.52 PM

ಗ್ರಾಹಕರೊಬ್ಬರಿಗೆ ಸಿಲಿಂಡರ್ ನಲ್ಲಿ ಗ್ಯಾಸ್ ಬದಲು ನೀರು ತುಂಬಿಸಿ ಕೊಟ್ಟ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅರ್ಧವೇಡುವಿನಲ್ಲಿ ನಡೆದಿದೆ.

ಸ್ಥಳೀಯ ಗ್ಯಾಸ್ ಏಜೆನ್ಸಿಯೊಬ್ಬರು ಮನೆಯೊಂದಕ್ಕೆ ಗ್ಯಾಸ್ ಸಿಲಿಂಡರ್ ವಿತರಿಸಿದೆ. ಸಿಲಿಂಡರ್ ಮೇಲೆ ನೀರು ಇದ್ದಿದ್ದರಿಂದ ಅನುಮಾನಗೊಂಡ ಗ್ರಾಹಕ ಸಿಲಿಂಡರ್ ಪರಿಶೀಲಿಸಿದ್ದಾನೆ. ಬಳಿಕ ಸಿಲಿಂಡರ್ ನೋಡಿದಾಗ ಸಿಲಿಂಡರ್ ಒಳಗಿಂದ ಗ್ಯಾಸ್ ಬದಲು ನೀರು ಬರುವುದನ್ನು ಕಂಡು ಗ್ರಾಹಕ ಆಶ್ಚರ್ಯಚಕಿತನಾಗಿದ್ದಾನೆ. ನಂತರ ಸ್ಥಳೀಯರೊಡನೆ ಗ್ಯಾಸ್ ಏಜೆನ್ಸಿಗೆ ತೆರಳಿ ವಿಚಾರಿಸಿದಾಗ, ‘ನಮಗೇನು ಗೊತ್ತು?’ ಎಂದು ಏಜೆನ್ಸಿ ಮಾಲೀಕ ಜಾರಿಕೊಂಡಿದ್ದಾನೆ ಎಂದು ಗ್ರಾಹಕ ತನ್ನ ಅಳಲನ್ನು ಹೊರಹಾಕಿದ್ದಾನೆ.

About The Author

Leave a Reply