
ಉಳ್ಳಾಲ: ವ್ಯಕ್ತಿಯೋರ್ವರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ತೊಕ್ಕೊಟ್ಟು ಸಮೀಪದ ಕಲ್ಲಾಪು ಪಾರ್ದೆ ಕಟ್ಟೆಯಲ್ಲಿ ನಡೆದಿದೆ.



ಮೂಲತಃ ನರಿಂಗಾನ ಗ್ರಾಮದ ಮೊಂಟೆಪದವಿನ ಮಠ ನಿವಾಸಿಯಾಗಿದ್ದ ನಂದಕುಮಾರ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನಂದಕುಮಾರ್ ಅವರು ಸಮಾರಂಭಗಳಿಗೆ ಲೈಟಿಂಗ್, ಮೈಕ್ ಅಳವಡಿಸುವ ವೃತ್ತಿ ನಡೆಸುತ್ತಿದ್ದು, ಕಲ್ಲಾಪು ಪಾರ್ದೆಕಟ್ಟೆಯ ಡೆನ್ನಿಸ್ ಡಿ’ಸೋಜಾ ಅವರ ಮನೆಯ ಮಹಡಿಯ ಕೋಣೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಇನ್ನು ಡೆನ್ನಿಸ್ ಡಿ’ಸೋಜಾ ಅವರ ಕುಟುಂಬ ನಗರದಲ್ಲಿ ವಾಸಿಸುತ್ತಿದ್ದು ಶುಕ್ರವಾರ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಬಂದಿದ್ದ ಡೆನ್ನಿಸ್ ಅವರು ಮಧ್ಯಾಹ್ನ ಮನೆಯ ಮಹಡಿಯ ಬಾಗಿಲು ತೆರೆದು ನೋಡಿದಾಗ ನಂದ ಕುಮಾರ್ ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.