ಮಂಗಳೂರು:ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಂದರು ಹಾಗು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಡ್ಸನ್ ಜಾರ್ಜ್ (19) ಮತ್ತು ಅದೇ ಜಿಲ್ಲೆಯ ಎಲ್ವಿನ್ ಶಿಜು (19)ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.ಆರೋಪಿಗಳಲ್ಲಿ ಅಡ್ಸನ್ ಜಾರ್ಜ್ ಎಂಬಾತ ಸೆಂಟ್ರಲ್ ಮಾರ್ಕೆಟ್ ಬಳಿ ಗಾಂಜಾ ಸೇವಿಸುತ್ತಿದ್ದಾಗ ಮತ್ತು ಎಲ್ವಿನ್ ಶಿಜು ಎಂಬಾತ ಬಲ್ಮಠದ ಬಳಿ ಗಾಂಜಾ ಸೇವಿಸಿ ತಿರುಗಾಡುತ್ತಿದ್ದಾಗ ಗಸ್ತು ನಿರತ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
Like this:
Like Loading...
Related