ಮೈಸೂರಿನಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ಒಂದೇ ಕುಟುಂಬದ ಐವರು ನಾಪತ್ತೆ!

ಮೈಸೂರು : ಮೈಸೂರಿನಲ್ಲಿ ಸಾಲಗಾರರ ಕಾಟಕ್ಕೆ ಹೆದರಿ ಒಂದೇ ಕುಟುಂಬದ ಐವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಕೆಜಿ ಕೊಪ್ಪಲಿನ ಗ್ರಾಮದ ಒಂದೇ ಕುಟುಂಬದ 5 ಜನರು ನಾಪತ್ತೆಯಾಗಿದ್ದಾರೆ. ಕೆಜಿ ಕೊಪ್ಪಲಿನ ಮಹೇಶ್ (35) ಪತ್ನಿ ಭವಾನಿ (28) ಪುತ್ರಿ ಪ್ರೇಕ್ಷ (3) ಮಹೇಶ್ ತಂದೆ ಮಹದೇವಪ್ಪ (65) ತಾಯಿ ಸುಮಿತ್ರ (55) ನಾಪತ್ತೆಯಾಗಿದ್ದಾರೆ. ಕುಟುಂಬಸ್ಥರ ನಾಪತ್ತೆ ಬಗ್ಗೆ ಭವಾನಿ ಸಹೋದರ ಜಗದೀಶ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply