ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕ ಸ್ಪೋಟ ಪ್ರಕರಣ – ಮಾಲೀಕ ಸೈಯದ್ ಬಶೀರ್ ಅರೆಸ್ಟ್..!

ಬೆಳ್ತಂಗಡಿ: ಮೂವರು ಕಾರ್ಮಿಕರನ್ನು ಬಲಿ ಪಡೆದ ಪಟಾಕಿ ತಯಾರಿಕಾ ಘಟಕದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ತಯಾರಿಕಾ ಘಟಕದ ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಗ್ರಾ.ಪಂಚಾಯತ್ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿಸುಡುಮದ್ದು ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಪೋಟ ಸಂಭವಿಸಿ ಮೂವರು ಕಾರ್ಮಿಕರು ಸಾವನಪ್ಪಿದರು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ಮಾಲೀಕ ಬಶೀರ್‌ ಮೇಲೆ ಎಫ್ಐಆರ್ ದಾಖಲಾಗಿದೆ‌.ಪ್ರಕರಣ ಸಂಬಂಧ ಜಾಗ ಹಾಗೂ ಪಟಾಕಿ ತಯಾರಿಕಾ ಮಾಲೀಕ ಸೈಯದ್ ಬಶೀರ್ ಘಟನೆ ಬಳಿಕ ವೇಣೂರಿನಿಂದ ಪರಾರಿಯಾಗಿದ್ದಾಗ ಖಚಿತ ಮಾಹಿತಿ ಮೇರೆಗೆ ಸುಳ್ಯದಲ್ಲಿ ವಶಕ್ಕೆ ಪಡೆದುಕೊಂಡು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಭಾನುವರ 5.15ರ ಸುಮಾರಿಗೆ ಈ ದುರಂತ ನಡೆದಿದ್ದು, ಕೇರಳದವರಾದ ಸ್ವಾಮಿ (55), ವರ್ಗೀಸ್‌ (68), ಹಾಸದ ಅರಸೀಕೆರೆ ಮೂಲದ ಚೇತನ್‌ (25) ಎಂಬ ಮೂವರು ಮೃತರಾಗಿದ್ದು, ಘಟನೆ ನಡೆದ ಬಳಿಕ ಉಳಿದ ಕಾರ್ಮಿಕರು, ಮಾಲೀಕ ಪರಾರಿಯಾಗಿದ್ದರು

Leave a Reply