ಮಂಗಳೂರು: ಅಂತರಾಷ್ಟ್ರೀಯ ಮಾನವ ಹಕ್ಕು ಆಯೋಗ ಇದರ ಕರ್ನಾಟಕ ರಾಜ್ಯ ಕಾರ್ಯಧ್ಯಕ್ಷರಾದ ಹನೀಫ್ ಮಲ್ಲೂರು ರವರು ಮೈಮುನ ಫೌಂಡೇಶನ್ ಗೆ ಭೇಟಿ ನೀಡಿ ಮಾನವ ಹಕ್ಕು ಆಯೋಗ ರಾಜ್ಯ ಸೋಶಿಯಲ್ ಸೆಲ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಆಸೀಫ್ ಆಪತ್ಭಾಂದ ರವರಿಗೆ ಹಾಗೂ (ಖಾಲಿದ್ ನಂದಾವರ) ಇವರನ್ನು ಅಂತರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಮಾಡಿ ಅವರನ್ನು ಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರ ಕೊಟ್ಟು ಅತ್ಮಿಯಾ ವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಹೀಮ್ ಮಲ್ಲೂರು, ಹಾಗೂ ಸರ್ಫ್ರಾಝ್ ಕುಳಾಯಿ,ಅಶೋಕ್ ಶೆಟ್ಟಿ ಕುಳಾಯಿ ಮುಂತಾದವರು ಉಪಸ್ಥಿತರಿದ್ದರು..ಕಾರ್ಯಕ್ರಮದ ಸ್ವಾಗತ ಭಾಷಣ ವನ್ನು ಆಸೀಫ್ ಆಪತ್ಬಾಂಧವ ನಿರ್ವಹಿಸಿ ಕಾರ್ಯಕ್ರಮವನ್ನು ರಹೀಮ್ ಮಲ್ಲೂರು ನಿರೂಪಿಸಿ ವಂದಿಸಿದರು…