August 29, 2025
WhatsApp Image 2024-03-06 at 12.02.03 PM

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಬೈಕ್ ಹಾಗೂ ಒಂದು ಕಾರು ಕಳ್ಳತನ‌ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಬೇಧಿಸಿದ್ದು, ಮೂವರು ಆರೊಪಿಗಳನ್ನು ಬಂಧಿಸಿದ್ದಾರೆ.

ಹಾಸನದ ಹೊಸ ಲೈನ್ ರಸ್ತೆ ನಿವಾಸಿ ನಂದನ ಗೌಡ ಕೆ.ಡಿ. (21), ಹಾಸನ ಹೇಮಾವತಿ ಆಸ್ಪತ್ರೆ ಬಳಿ ನಿವಾಸಿ ಹೇಮಂತ್ (20) ಮತ್ತು ಹರ್ಷಿತ್ ಕುಮಾರ್ (19) ಬಂಧಿತ ಆರೋಪಿಗಳು. ಧರ್ಮಸ್ಥಳ ಗ್ರಾಮದಿಂದ ಫೆ.24ರಂದು ರಾತ್ರಿ ವೇಳೆ ಮೂರು ಬೈಕ್ ಗಳು ಕಳ್ಳತನವಾಗಿದ್ದವು. ಇದಾದ ಬಳಿಕ ಮಾ.1 ರಂದು ಕೊಕ್ಕಡದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಕಳ್ಳತನವಾಗಿತ್ತು. ಈ ಕಳ್ಳತನ ಪ್ರಕರಣದ‌ ಬೆನ್ನು ಹತ್ತಿದ ಪೊಲೀಸರು ಇದೀಗ ಹಾಸನದಿಂದ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ಮೂರು ಬೈಕ್ ಗಳನ್ನು ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Leave a Reply