Visitors have accessed this post 442 times.
ಮಂಗಳೂರು: ವಿಮಾನ ನಿಲ್ದಾಣಕ್ಕೆ ದುಬ್ಬಾಯಿಂದ ಆಗಮಿಸಿದ ಪ್ರಯಾಣಿಕ ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಈ ಒಳಪಡಿಸಿದಾಗ 9,92,940 ಮೌಲ್ಯದ ಇ ಸಿಗ ರೇಟ್‌ಗೆ ಸಂಬಂಧಿಸಿದ ವಿವಿಧ ವಸ್ತುಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿ ಕಾಸರ ಗೋಡು ಮೂಲದ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ತಪಾಸಣೆ ವೇಳೆ ಆತನ ಬ್ಯಾಗ್‌ನಲ್ಲಿ 240 ಪ್ಯಾಕೆಟ್ ನ್ಯಾಚುರಲ್ ಅಮೆರಿಕನ್ – ಸ್ಪಿರಿಟ್, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಪಿಒಡಿ ಕಾಟ್ರಿಡ್ಜ್ 20 ಪ್ಯಾಕೆಟ್ * ಕ್ಯಾಲಿಬರ್ನ್ ಎ2 ರಿಲೈಯಬಲ್ ಪಿಒಡಿ, 20 ಪ್ಯಾಕೆಟ್ ಕ್ಯಾಲಿಬರ್ನ್ ಈ ಎ2 ಸೈಡ್ ರಿಫಿಲ್ಲಿಂಗ್ ಪಿಒಡಿ ಮತ್ತು 20 ಪ್ಯಾಕೆಟ್ ಕ್ಯಾಲಿಬರ್ನ್ ಜಿ3 ರಿಫಿಲ್ಲೆಬಲ್ ಪಿಒಡಿ ಪತ್ತೆಯಾಗಿದೆ.
ಇವೆಲ್ಲ ಇ-ಸಿಗರೇಟ್‌ನ ವಿವಿಧ ಬಿಡಿ ಭಾಗಳಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.