ರಾಜ್ಯಮಟ್ಟದ ಸನ್ಮಾನಕ್ಕೆ ಬಂಟ್ವಾಳದ ಇಬ್ಬರು ಮಹಿಳಾ ಚಾಲಕಿಯರು ಆಯ್ಕೆ

ಬಂಟ್ವಾಳ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಜೀವಿನಿಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಮಾ.6ರಂದು ಬುಧವಾರ
ನಡೆಯಲಿರುವ ಘನತ್ಯಾಜ್ಯ ನಿರ್ವಹಣೆಯ ಮಹಿಳಾ ಚಾಲಕರ ರಾಜ್ಯ ಮಟ್ಟದ ಸನ್ಮಾನ ಕಾರ್ಯಕ್ರಮಕ್ಕೆ ದ.ಕ. ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ಇಬ್ಬರು ಮಹಿಳಾ ಚಾಲಕಿಯರು ಆಯ್ಕೆಯಾಗಿದ್ದಾರೆ. ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಮಾತೃಸಂಜೀವಿನೀ ಗ್ರಾಮ ಪಂಚಾಯಿತಿ ಒಕ್ಕೂಟದ, ಕೀರ್ತಿ ಸ್ತ್ರೀಶಕ್ತಿ ಗುಂಪಿನ ಸದಸ್ಯೆ ತ್ಯಾಜ್ಯ ಘಟಕದ ವಾಹನ ಚಾಲಕಿ ಪ್ರಮೀಳ ಹಾಗೂ ಪುಣಚ ಗ್ರಾಮ ಪಂಚಾಯಿತಿಯ ಉಜ್ವಲ ಸಂಜೀವಿನಿ ಒಕ್ಕೂಟದ
ಧನ್ಯಶ್ರೀ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆ ಉಷಾ ಎಚ್. ಆಯ್ಕೆಯಾದವರು. ಬುಧವಾರ ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ದ.ಕ. ಜಿಲ್ಲೆಯಿಂದ ಇಬ್ಬರು ಮಹಿಳೆಯರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದ್ದು ಮಂಗಳವಾರ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ

Leave a Reply