Visitors have accessed this post 633 times.
ಕಳೆದ ಜನವರಿ 8ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಘಟನೆ ನಡೆದು 58 ದಿನಗಳ ಬಳಿಕ ಹಾನಗಲ್ ಠಾಣೆಯ ಪೊಲೀಸರು ಹಾವೇರಿಯ ಜೆ ಎಂ ಎಫ್ ಸಿ ಕೋರ್ಟಿಗೆ 873 ಪುಟಗಳ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಘಟನೆ ಕುರಿತಂತೆ JMFC ಕೋರ್ಟಿಗೆ 873 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ 2024 ಜನವರಿ 8ರಂದು ಹಾನಗಲ್ ಬಳಿ ನಡೆದಿದ್ದ ಗ್ಯಾಂಗ್ ರೇಪ್ ಎನ್ನಲಾಗಿದ್ದು, ಶಿರಸಿ ಮೂಲದ ಮುಸ್ಲಿಂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಹೇಳಲಾಗುತ್ತಿದೆ.
ವಿಚಾರಣೆಯ ವೇಳೆ ಸಂತ್ರಸ್ತೇ 7 ಜನ ಆರೋಪಿಗಳನ್ನು ಗುರುತಿಸಿದ್ದಳು.20 ದಿನಗಳ ಹಿಂದೆ ಹಾನಗಲ್ ಪೊಲೀಸರು ಹೊತಣಿಕೆಯನ್ನು ಪೂರ್ಣಗೊಳಿಸಿದ್ದರು ಆದರೆ ಎಫ್‌ಎಸ್‌ಎಲ್ ವರದಿ ಹಾಗೂ ಡಿಎನ್‌ಎ ವರದಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದರು ಎಂದು ಹೇಳಲಾಗುತ್ತಿದೆ ಅತ್ಯಾಚಾರ ಎಸೆಗಿದ್ದಾರೆ ಎನ್ನಲಾದ ಏಳು ಪ್ರಮುಖ ಆರೋಪಿಗಳ ಹೆಸರನ್ನು ಉಲ್ಲೇಖಸಲಾಗಿದೆ.
ಪ್ರಕರಣ ಸಂಬಂಧ ಹಾನಗಲ್ ಪೊಲೀಸರು 19 ಆರೋಪಿಗಳನ್ನು ಬಂಧಿಸಿದ್ದರು.ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಒಟ್ಟು 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಆರೋಪಿಗಳ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.