August 30, 2025
WhatsApp Image 2024-03-08 at 11.55.19 AM

ಮಂಗಳೂರು: ಜಮೀನಿನ ನಕ್ಷೆ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಸರ್ವೆಯರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸರ್ವೆಯರ್ ಶೀತಲ್‌ರಾಜ್ (38) ಲಂಚ ಸ್ವೀಕರಿಸಿದ ಆರೋಪಿಯಾಗಿದ್ದಾರೆ.

ನೀರುಮಾರ್ಗದ ವ್ಯಕ್ತಿಯೊಬ್ಬರು ಸಂಬಂಧಿ ಲಿಲ್ಲಿ ಪೀಟರ್ ವಾಸ್ ಇವರ ಪರವಾಗಿ ಸ್ಟೆಲ್ಲಾ ಜಾನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಮಯ ಸರಕಾರಿ ಶುಲ್ಕ 1500 ರೂ. ಪಾವತಿಸಿ ರಶೀದಿ ಪಡೆದಿದ್ದಾರೆ ಎನ್ನಲಾಗಿದೆ.

ಫೆ.29ರಂದು ಮಿನಿ ವಿಧಾನಸೌಧದಲ್ಲಿರುವ ಸರ್ವೆ ಇಲಾಖೆಯ ಸರ್ವೆಯರ್ ಶೀತಲ್‌ ರಾಜ್ ಎಸ್.ಜಿ. ಅವರು ಸರ್ವೆಗೆ ಬಂದಿದ್ದು, ಜಮೀನಿನ ಸರ್ವೆ ಕಾರ್ಯ ನಡೆಸಿ ಸ್ಥಳ ಮಹಜರು ಮಾಡಿದ್ದಾರೆ. ಬಳಿಕ ಜಮೀನಿನ ನಕ್ಷೆ ನೀಡಲು ಸ್ವಲ್ಪ ಖರ್ಚು ಇದೆ. 5 ಸಾವಿರ ರೂ. ಕೊಡಿ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ದೂರುದಾರರು ಸ್ವಲ್ಪ ಕಡಿಮೆ ಮಾಡುವಂತೆ ಚರ್ಚೆ ಮಾಡಿದ್ದು, ಆಗ 4 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದಾರೆ. ದೂರುದಾರರಿಂದ ಲಂಚದ ಹಣ ಸ್ವೀಕರಿಸುವಾಗ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಲುವರಾಜು ಬಿ., ಡಾ.ಗಾನ ಪಿ.ಕುಮಾರ್ ಹಾಗೂ ಇನ್‌ಸ್ಪೆಕ್ಟರ್ ಅಮಾನುಲ್ಲಾ, ಸುರೇಶ್ ಕುಮಾರ್ ಪಿ. ಸಿಬ್ಬಂದಿ ಜತೆ ಕಾರ್ಯಾಚರಣೆ ನಡೆಸಿದ್ದಾರೆ.

About The Author

Leave a Reply