October 29, 2025
WhatsApp Image 2024-03-13 at 6.29.06 PM

ಮಂಗಳೂರು : ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆಯಾಗಿದ್ದು  ಹೋಳಿ ಹಬ್ಬದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲಾರದು ಎಂದು ಬಜರಂಗದಳ ಎಚ್ಚರಿಕೆ ರವಾನಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ  ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆ ಯಾಗಿದ್ದು ಅದರದ್ದೇ ಆದ ಧಾರ್ಮಿಕ ಹಿನ್ನೆಲೆ ಇದೆ ಆದ್ರೆ ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಗಾಂಜಾ, ಡ್ರಗ್ಸ್,‌ಅಫೀಮು ಸೇವಿಸಿ ಅನೈತಿಕ ಚಟುವಟಿಕೆ’ ನಡೆಯುತ್ತಿರುವ ಜಾಲ ಕರಾವಳಿ ಭಾಗದಲ್ಲಿ ಸಕ್ರೀಯವಾಗಿದೆ. ಕಳೆದ ಬಾರಿ ನಗರದ ಮರೋಳಿಯಲ್ಲಿ ಹೋಳಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಏನಾಗಿತ್ತು ಅನ್ನೋದನ್ನ ಮನವರಿಕೆ ಮಾಡಿಕೊಳ್ಳಿ ಎಂದು ನೆನಪಿಸಿದ್ದು,ಯುವ ಸಮುದಾಯವನ್ನ ತಪ್ಪು ಹಾದಿಗೆಳೆಯುವ ಕೃತ್ಯ ಎಸಗಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು.ಈ ಬಗ್ಗೆ ಈಗಾಗ್ಲೇ ಪೊಲೀಸ್ ಇಲಾಖೆಗೆ ಬಜರಂಗದಳ ಮನವಿ ಮಾಡಿದ್ದು ಅದನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದರೆ ನೇರ ಪರಿಣಾಮವನ್ನು ಸಂಘಟಕರೇ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

About The Author

Leave a Reply