February 15, 2026
WhatsApp Image 2024-03-14 at 10.30.26 AM

ಮಡಿಕೇರಿ: ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಅಬ್ಬೂರಿನ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಕಾಡಾನೆ ದಾಳಿಕೆ ಸಿಲುಕಿ ಮೃತ ಪಟ್ಟ ಘಟನೆ ವರದಿಯಾಗಿದೆ.

ಅಸ್ಸಾಂನ ಅಜಬಾನು (37) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಮಧ್ಯಾಹ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂಟಿ ಕಾಡಾನೆಯೊಂದು ದಾಳಿ ನಡೆಸಿದೆ. ದಾಳಿಗೆ ಸಿಲುಕಿದ ಅಜಬಾನು ಅವರನ್ನು ಕೂಡಲೇ ಪಾಲಿಬೆಟ್ಟದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನಾಗರಹೊಳೆ ಅರಣ್ಯ ಇಲ್ಲಿಗೆ ಕೇವಲ 2 ಕಿ.ಮೀ ಇದೆ. ಅಲ್ಲಿಂದ ಬಂದಿರುವ ಈ ಆನೆಯನ್ನು ನಿರಂತರವಾಗಿ ಕಾಡಿಗೆ ಓಡಿಸಲಾಗುತ್ತಿದೆ. ಆದರೆ, ಮತ್ತೆ ಮತ್ತೆ ಅದು ಕಾಫಿತೋಟಗಳಿಗೆ ವಾಪಸ್ ಬರುತ್ತಿತ್ತು. ಇದೇ ಆನೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಆಸ್ಪತ್ರೆ ಮುಂದೆ ಜಮಾಯಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

About The Author

Leave a Reply